ವೀರಾಜಪೇಟೆ, ಡಿ. 28 : ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ “ಕಥಾ ಮತ್ತು ಕುಮಿತೆ” ವಿಭಾಗದಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಮುಹಮ್ಮದ್ ಅಫ್ನಾನ್ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಪಡೆದು ಸಾಧನೆಗೈದಿದ್ದಾರೆ. ಇವರು ವೀರಾಜಪೇಟೆ ಮೊಗರಗಲ್ಲಿಯ ಎಂ.ಪಿ.ಅಲ್ತಾಫ್ ಹಾಗೂ ಉಝ್ಮಾ ಸಿಗಾರ್ ಅವರ ಪುತ್ರ ಮತ್ತು ಸನ್ಸಾಯಿ ಎಂ.ಬಿ.ಚಂದ್ರನ್ ಅವರ ಶಿಷ್ಯ.