ಬೆಂಗಳೂರು, ಡಿ. 28: ಸ್ಥಳೀಯ ಕಾರ್ಯಕರ್ತರು ಹಾಗೂ ಪರಿಸರವಾದಿಗಳು ವಿರೋಧಿಸುತ್ತಿರುವ ಕರ್ನಾಟಕ ಮತ್ತು ಕೇರಳರ ಸಂರಕ್ಷಿತ ಪ್ರದೇಶಗಳು ಮತ್ತು ಮೀಸಲು ಅರಣ್ಯಗಳ ಮೂಲಕ ಹಾದುಹೋಗುವ ತಲಚೇರಿ-ಮೈಸೂರು ಹೊಸ ರೈಲು ಮಾರ್ಗದ ಅಭಿವೃದ್ಧಿ ಕುರಿತು ಕೇಂದ್ರ ಸರ್ಕಾರ ಯಾವದೇ ನಿರ್ಧಾರ ತೆಗೆದುಕೊಳ್ಳುವದಿಲ್ಲ ಎಂದು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಯೋಜನೆಯ ಮುಂಚೂಣಿಯಲ್ಲಿರುವ ಕೇರಳ ಸರ್ಕಾರ, ಉದ್ದೇಶಿತ ಬ್ರಾಡ್ ಗೇಜ್ ಮಾರ್ಗದ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನು ಮತ್ತು ಸಾಧ್ಯತಾ ಅಧ್ಯಯನ ನಡೆಸುವಂತೆ ಕೊಂಕಣ ರೈಲ್ವೆ ನಿಗಮ ನಿಯಮಿತಕ್ಕೆ ವಹಿಸಿದೆ. ರೈಲ್ವೆ ಮಂಡಳಿ ಮತ್ತು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಧ್ಯೆ ನಡೆದಿರುವ ಮಾತುಕತೆಯಂತೆ, ಕೇರಳ ಸರ್ಕಾರ ವಿಸ್ತೃತ ವರದಿಯನ್ನು ತಯಾರಿಸಿ ತಾ. 31 ರೊಳಗೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸುವ ಕುರಿತು ನಿರ್ಧಾರ ಮಾಡಲಾಯಿತು. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಉದ್ದೇಶಿತ ರೈಲ್ವೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಲೋಕಸಭೆಯಲ್ಲಿ ಸಚಿವ ಪಿಯೂಷ್ ಗೋಯಲ್ ಯೋಜನೆಯ ವರದಿಯನ್ನು ಮಂಡಿಸಿದರು. ಕೇರಳ ಮತ್ತು ಕರ್ನಾಟಕ ಸರ್ಕಾರಗಳೆರಡೂ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಮೀಕ್ಷೆ ನಡೆಸಿದ ಆಧಾರದ ಮೇಲೆ ಯೋಜನೆಯ ಅನುಮತಿ ನಿರ್ಧಾರವಾಗುತ್ತದೆ.

(ಮೊದಲ ಪುಟದಿಂದ) ಹೀಗಾಗಿ ಕೇರಳ ಸರ್ಕಾರ ಕರ್ನಾಟಕಕ್ಕೆ ಪ್ರಸ್ತಾವನೆಯನ್ನು ಕಳುಹಿಸಬೇಕು. ಇದರಿಂದ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದಾದರೆ ಅರಣ್ಯ ಮತ್ತು ಕಂದಾಯ ಇಲಾಖೆ ಕೇರಳ ಸರ್ಕಾರಕ್ಕೆ ಸಮೀಕ್ಷೆ ನಡೆಸಲು ಸಹಾಯ ಮಾಡಲಿವೆ ಎಂದರು.

ಯೋಜನೆಯನ್ನು ಮೀಸಲು ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವದೇ ತೊಂದರೆಯಿಲ್ಲವೆಂದಾದರೆ ವಿಶೇಷ ಯೋಜನಾ ವಾಹನಗಳ ರಚನೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಕೇರಳ ಸರ್ಕಾರ ನಿಯೋಜಿತ ದೆಹಲಿ ಮೆಟ್ರೊ ರೈಲು ನಿಗಮ ತಯಾರಿಸಿದ ಸಾಧ್ಯತಾ ವರದಿಯಲ್ಲಿ ಯೋಜನೆ ಆರ್ಥಿಕವಾಗಿ ಅಲಭ್ಯ ಎಂದು ಕಂಡುಬಂದಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ