ಮಡಿಕೇರಿ, ಡಿ. 28: ನಗರದ ರಾಜಾಸೀಟ್ ಮಾರ್ಗ ಬದಿಯಿರುವ ಕುವೆಂಪು ಪುತ್ಥಳಿಯ ಆವರಣವನ್ನು ಯಾರೋ ತಿಳಿಗೇಡಿಗಳು ಹಾನಿಗೊಳಿಸಿರುವ ದೃಶ್ಯ ಕಂಡು ಬಂದಿದೆ.

ತಾ. 29 ರಂದು (ಇಂದು) ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ತಯಾರಿ ನಡೆಸಿರುವ ಬೆನ್ನಲ್ಲೇ ಈ ಕೃತ್ಯ ನಡೆದಿದೆ.

ಕುವೆಂಪು ಪುತ್ಥಳಿ ಸುತ್ತ ಅಳವಡಿಸಿರುವ ಕಬ್ಬಿಣದ ಪೈಪುಗಳ ಸಹಿತ ತಡೆಕಟ್ಟೆಗಳು ಕುಸಿದು ಬಿದ್ದಿವೆ. ಯಾರೋ ಪ್ರವಾಸಿಗರು ಈ ಆವರಣವೇ ಹಾನಿಗೊಳಿಸಿದ್ದಲ್ಲದೆ ಅಲ್ಲಿ ಊಟ ಇತ್ಯಾದಿ ತಿಂದುಂಡು ಗಲೀಜು ಮಾಡಿದ್ದನ್ನು ಗಮನಿಸಿ, ನಗರಸಭಾ ಸಿಬ್ಬಂದಿ ಶುಚಿಗೊಳಿಸಿದ್ದಾರೆ. ಸಧ್ಯವೇ ರಾಷ್ಟ್ರಕವಿ ಪುತ್ಥಳಿಯಿರುವ ಆವರಣದ ದುರಸ್ತಿಗೊಳಿಸುವದಾಗಿ ನಗರಸಭೆ ಮೂಲಗಳು ‘ಶಕ್ತಿ’ಗೆ ಖಚಿತಪಡಿಸಿವೆ.