ಕುಶಾಲನಗರ, ಡಿ. 28: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಗುರುವಾರ ವಾಲ್ನೂರು-ತ್ಯಾಗತ್ತೂರು ಹಾಗೂ ನಂಜರಾಯಪಟ್ಟಣ ಸ್ಥಾನೀಯ ಸಮಿತಿ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡರು.
ಕಾರು ನಿಲ್ದಾಣದ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಧರಣಿ ನಡೆಸಿದ ಪದಾಧಿಕಾರಿಗಳು ಕಾವೇರಿ ತಾಲೂಕಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿದರು.
ಧರಣಿಯಲ್ಲಿ ಸ್ಥಾನೀಯ ಸಮಿತಿಗಳ ಪ್ರಮುಖರಾದ ಎ.ವಿ.ಶಾಂತಕುಮಾರ್, ಕೆ.ವಿ.ಪ್ರೇಮಾನಂದ, ಮನುಮಹೇಶ್, ಲೋಕನಾಥ್, ಭುವಿನ್, ಎಂ.ಕೆ.ಕುಶಾಲಪ್ಪ, ಜೆ.ಪಿ.ರಾಜು, ಆರ್.ಕೆ.ಚಂದ್ರ, ರತೀಶ್, ಜತ್ತವಿಜಯ, ವಿಶ್ವ, ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮತ್ತಿತರರು ಇದ್ದರು.