ಸೋಮವಾರಪೇಟೆ,ಡಿ.28: “2018ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ತಾನು ಕಾಂಗ್ರೆಸ್ ಸೇರ್ಪಡೆಗೊಳ್ಳುವದಾಗಿ ಕೆಲವರು ಊಹಾಪೋಹದ ಮಾತುಗಳನ್ನಾಡುತ್ತಿದ್ದು, ಚಿನ್ನದ ತಟ್ಟೆಯಲ್ಲಿಟ್ಟು ಟಿಕೇಟ್ ಕೊಟ್ಟರೂ ಕಾಂಗ್ರೆಸ್‍ನಿಂದ ಸ್ಪರ್ಧಿಸುವದಿಲ್ಲ” ಎಂದು ಮಾಜೀ ಸಚಿವ, ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ‘ಶಕ್ತಿ’ಯೊಂದಿಗೆ ಖಚಿತ ನುಡಿಯಾಡಿದ್ದಾರೆ.ಜೀವಿಜಯ ಅವರು ಕಾಂಗ್ರೆಸ್‍ನಿಂದ ಟಿಕೇಟ್ ತರಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.