ಚಿತ್ರ, ವರದಿ: ರಫೀಕ್ ತೂಚಮಕೇರಿ ಪೆÇನ್ನಂಪೇಟೆ, ಡಿ. 23: ನ್ಯಾಯ ಅರಸಿ ಬರುವ ಕಕ್ಷಿದಾರರಿಗೆ ತೃಪ್ತಿದಾಯಕ ನ್ಯಾಯ ವಿತರಣೆಯಲ್ಲಿ ವಕೀಲರ ಪಾತ್ರ ಬಹುಮುಖ್ಯವಾಗಿದ್ದು, ಎಂದಿಗೂ ಏಕಮುಖಿಗಳಾಗಿರ ಬಾರದು. ಸಮಾನ ನ್ಯಾಯ ವಿತರಣೆಯಲ್ಲಿ ವಕೀಲರು ನ್ಯಾಯಾಲಯದ ಅಧಿಕಾರಿ ಗಳಾಗಿಯೂ ಕಾರ್ಯನಿರ್ವಹಿಸಬೇಕು ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಕರೆ ನೀಡಿದರು.
ಪೆÇನ್ನಂಪೇಟೆಯ ನಿರೀಕ್ಷಣಾ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಲಯ ಸಂಕೀರ್ಣ ಮತ್ತು ನ್ಯಾಯಾಧೀಶರ ನೂತನ ವಸತಿಗೃಹ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನ್ಯಾಯಪೀಠಕ್ಕೆ ಸಾಕ್ಷಿದಾರರ ಸಹಕಾರ ಎಷ್ಟು ಮುಖ್ಯವೋ ಅಷ್ಟೇ ವಕೀಲರ ಸಹಕಾರವು ಮುಖ್ಯವಾಗಿದೆ. ಕೆಲವೊಮ್ಮೆ ಕಕ್ಷಿದಾರರಿಗೆ ಸಮಾಧಾನಕರ ನ್ಯಾಯ ಒದಗಿಸಲು ವಕೀಲರ ಸಲಹೆಯೂ ನ್ಯಾಯಪೀಠಕ್ಕೆ ಅಗತ್ಯವಿರುತ್ತದೆ ಅಲ್ಲದೆ ಇದು ಹೆಚ್ಚಿನ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ 1300 ನ್ಯಾಯಾಲಯ ಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ನಾಲ್ಕೂವರೆ ವರ್ಷದಲ್ಲಿ ನೂತನವಾಗಿ 254 ನ್ಯಾಯಾಲಯಗಳು ಆರಂಭಗೊಂಡಿವೆ. ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಭೂ ಕಬಳಿಕೆ ವಿಚಾರಣೆ ಸಂಬಂಧ ವಿವಿಧ ನ್ಯಾಯಾಲಯ ಗಳನ್ನು ಸರಕಾರ ಸ್ಥಾಪನೆ ಮಾಡಿದೆ. ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ನೀಡುವಲ್ಲಿ ಇಡೀ ದೇಶದಲ್ಲೇ ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ. ಆದರೆ ರಾಜ್ಯದಲ್ಲಿ ವ್ಯಾಜ್ಯಗಳ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಏರುತ್ತಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಹೈಕೋರ್ಟ್ನಲ್ಲಿ 2,90,000 ವ್ಯಾಜ್ಯಗಳಿವೆ. ಅಲ್ಲದೆ ರಾಜ್ಯದ ವಿವಿಧ ಅಧೀನ ನ್ಯಾಯಾಲ ಯಗಳಲ್ಲಿ ಒಟ್ಟು 13,76,848 ವ್ಯಾಜ್ಯಗಳು ವಿಲೇವಾರಿಗೆ ಬಾಕಿಯಿವೆ. ಸರಕಾರ ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ ವ್ಯಾಜ್ಯಗಳ ಸಂಖ್ಯೆ ಏರುತ್ತಿರುವದನ್ನು ಗಮನಿಸಿದರೆ ಇದರ ವಿಲೇವಾರಿ ಯಾವಾಗ ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತದೆ ಎಂದ ಜಯಚಂದ್ರ,
(ಮೊದಲ ಪುಟದಿಂದ) ವ್ಯಾಜ್ಯಗಳ ಶೀಘ್ರ ವಿಲೇವಾರಿಯಲ್ಲಿ ವಕೀಲರ ಪಾತ್ರ ಸಾಕಷ್ಟಿದೆ ಎಂಬ ಹೊಣೆಗಾರಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ರಾಜ್ಯ ಸರಕಾರ ಜಾರಿಗೆ ಬಂದ ನಂತರ ಒಟ್ಟು 161 ಕಾನೂನನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಲ್ಲಿ ಮೌಡ್ಯ ನಿಷೇಧ ಕಾನೂನು ಸೇರಿದೆ. ಈ ಎಲ್ಲಾ ಕಾನೂನು ಸರಿಯಾಗಿ ಜಾರಿಯಾಗಬೇಕು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಹಂತದ ನ್ಯಾಯಾಲಯಗಳಲ್ಲೂ ಸಾಕಷ್ಟು ವ್ಯಾಜ್ಯ ವಿಲೇವಾರಿಗೆ ಬಾಕಿಯಿದ್ದು, ಇದೆಲ್ಲವೂ ಶೀಘ್ರಗತಿಯಲ್ಲಿ ವಿಲೇವಾರಿಯಾಗಿ ನೊಂದವರಿಗೆ ನ್ಯಾಯ ದೊರಕಬೇಕು ಎಂದು ಅಭಿಪ್ರಾಯ ಪಟ್ಟ ಸಚಿವರು, ಓಬಿರಾಯನ ಕಾಲದ ಕಾನೂನನ್ನು ಮಾರ್ಪಡಿಸುವ ಅಗತ್ಯವಿದೆ. ಅಲ್ಲದೆ ಕೆಲವೊಮ್ಮೆ ಇದು ಅನಿವಾರ್ಯವೂ ಹೌದು. ನಿರ್ವಹಣೆಗೆ ಸುಲಭವಾಗುವ ಕಾನೂನು ರೂಪುಗೊಳ್ಳುವ ಅಗತ್ಯತೆ ಇಂದಿಗಿದೆ ಎಂದು ಹೇಳಿದರು.
ರೂ. 35 ಕೋಟಿ ವೆಚ್ಚದಲ್ಲಿ ಮಡಿಕೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಮುಂದಿನ ಫೆಬ್ರವರಿ ತಿಂಗಳಾಂತ್ಯಕ್ಕೆ ಉದ್ಘಾಟನೆಯಾಗಲಿದೆ. ಈ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ವೇದಿಕೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಸ್.ಎಚ್. ಪ್ರಭು ಅವರಿಗೆ ಸೂಚನೆ ನೀಡಿದ ಸಚಿವರು, ನ್ಯಾಯಾಂಗ ವ್ಯವಸ್ಥೆಯ ಉನ್ನತೀಕರಣಕ್ಕೆ ಸಹಕಾರ ನೀಡಲು ರಾಜ್ಯ ಸರಕಾರ ಸದಾ ಸಿದ್ಧವಿದೆ. ಆದರೆ ನ್ಯಾಂiÀi ವಿತರಣೆ ಮಾತ್ರ ಶೀಘ್ರಗತಿಯಲ್ಲಿ ಆಗಬೇಕು ಎಂಬವದೇ ನಮ್ಮ ಸರಕಾರದ ಆಶಯ ಎಂದರು.
ಇದಕ್ಕೂ ಮೊದಲು ನೂತನ ಸಂಕೀರ್ಣದಲ್ಲಿ ಸಿವಿಲ್ ನ್ಯಾಯಾಲಯವನ್ನು ಅಧಿಕೃತವಾಗಿ ಉದ್ಘಾಟಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಅವರು ಮಾತನಾಡಿ, ಕಾರಣಾಂತರಗಳಿಂದ ಉಂಟಾಗುವ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಕಕ್ಷಿದಾರರಿಗೆ ಸಾಕಷ್ಟು ಅವಕಾಶಗಳಿವೆ. ಲೋಕ ಅದಾಲತ್, ಫಾಸ್ಟ್ರ್ಯಾಕ್ ನ್ಯಾಯಾಲಯ ಮತ್ತು ಸಂಧಾನದ ಮೂಲಕವೂ ನ್ಯಾಯ ಪಡೆದುಕೊಳ್ಳಬಹುದು. ಆದರೆ ಅದು ಕಕ್ಷಿದಾರರಿಗೆ ತೃಪ್ತಿಕರವಾಗಿ ನ್ಯಾಯ ವಿತರಣೆ ಆಗಬೇಕು. ಇದನ್ನು ವಕೀಲರು ಗಂಭೀರವಾಗಿ ಪರಿಗಣಿಸಬೇಕು ಎಂದರು. ಎಲ್ಲಕ್ಕಿಂತಲು ಮುಖ್ಯವಾಗಿ ತಮ್ಮ ನಡೆ ನುಡಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುವದು ಇಂದಿನ ನಾಗರಿಕ ಸಮಾಜದ ಬಹುಮುಖ್ಯ ಆದ್ಯತೆ ಆಗಿದೆ ಎಂದು ಮಹಾತ್ಮ ಗಾಂಧೀಜಿಯವರ ವೇದ ವಾಕ್ಯ ಒಂದನ್ನು ಉಲ್ಲೇಖಿಸಿ ಮಾತನಾಡಿದ ಎ.ಎಸ್. ಬೋಪಣ್ಣ ಅವರು, ಸಹಬಾಳ್ವೆಯ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿರಬೇಕು ಎಂದರು.
ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 62 ಮಂಜೂರಾತಿ ನ್ಯಾಯಾಧೀಶ ಹುದ್ದೆಗಳಿದ್ದರೂ ಕೇವಲ 24 ನ್ಯಾಯಾಧೀಶರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಪರಿಸ್ಥಿತಿ ರಾಜ್ಯದ ಹಲವಾರು ನ್ಯಾಯಾಲಯಗಳಲ್ಲಿದೆ. ಹೀಗಿರುವಾಗ ವ್ಯಾಜ್ಯಗಳ ಶೀಘ್ರ ವಿಲೇವಾರಿ ನಿರೀಕ್ಷೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ತಮ್ಮ ತಮ್ಮ ಆಶ್ರಯಗಳನ್ನು ಎತ್ತಿ ಹಿಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೂ ಆಗಿರುವ ಕೊಡಗು ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್.ಬಿ. ಬೂದಿಹಾಳ್ ಅವರು ಮಾತÀನಾಡಿ, ವಕೀಲರು ಕೇವಲ ಕಕ್ಷಿದಾರರನ್ನು ಪ್ರತಿನಿಧಿಸಿದರೆ ಮಾತ್ರ ತಮ್ಮ ಜವಾಬ್ದಾರಿ ಪೂರ್ಣಗೊಳ್ಳುವದಿಲ್ಲ, ಕಕ್ಷಿದಾರರ ಪರ ವಾದಿಸುವದರ ಜೊತೆಗೆ ಪ್ರಕರಣ ಸತ್ಯಾಂಶವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡುವ ಮಧ್ಯಸ್ಥನಾಗಿಯೂ ಕೆಲಸ ಮಾಡಬೇಕು. ಅಲ್ಲದೆ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಕಕ್ಷಿದಾರರ ನಡುವೆ ಸೇತುವೆಯಾಗಿ ನ್ಯಾಯ ಸೇವೆ ಗೈಯ್ಯಬೇಕಾಗಿರುವ ವಕೀಲರು ಮೊದಲು ತಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಲು ಆದ್ಯತೆ ನೀಡಬೇಕು. ಅಲ್ಲದೆ ವಕೀಲರಲ್ಲಿ ಅತೀ ಅಗತ್ಯವಾಗಿ ಬೇಕಾಗಿರುವದು ತಾಳ್ಮೆಯಾಗಿದೆ. ಹೀಗಾದಲ್ಲಿ ಮಾತ್ರ ವಕೀಲರು ಜನ ಸಮುದಾಯದಲ್ಲಿ ವಿಶೇಷ ಸ್ಥಾನ ಪಡೆಯಲು ಸಾಧ್ಯ ಎಂದರು.
ಪೆÇನ್ನಂಪೇಟೆಯ ನೂತನ ನ್ಯಾಯಾಲಯ ಕಟ್ಟಡದ ಮುಂಭಾಗದಲ್ಲಿರುವ ಹಳೆಯ ನಿರೀಕ್ಷಣಾ ಮಂದಿರವನ್ನು ಸ್ಥಳಾಂತರಗೊಳಿಸಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಸಹಕಾರ ನೀಡಬೇಕು ಎಂದು ವೇದಿಕೆಯಲ್ಲಿದ್ದ ಸಚಿವ ಟಿ.ಬಿ. ಜಯಚಂದ್ರ ಅವರಲ್ಲಿ ನ್ಯಾಯಾಧೀಶರಾದ ಬೂದಿಹಾಳ್ ಅವರು ಮನವಿ ಮಾಡಿದರು. ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅಶೋಕ್ ಜಿ. ನಿಜಗಣ್ಣವರ್ ಮತ್ತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಪೆÇನ್ನಂಪೇಟೆ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ಎಂ.ಇ. ಮೋಹನ್ ಗೌಡ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÇನ್ನಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಸ್. ಪ್ರಭು ಮತ್ತು ವಕೀಲರಾದ ಮಾಚಿಮಂಡ ಸುರೇಶ್ ಅಯ್ಯಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೆÇನ್ನಂಪೇಟೆ ವಕೀಲರ ಸಂಘದ ಸ್ಥಾಪಕ ಅಧ್ಯಕ್ಷ ಎ.ಟಿ. ಭೀಮಯ್ಯ ಮತ್ತು ನೂತನ ಕಟ್ಟಡ ಕಾಮಗಾರಿಯ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಹೈಕೋರ್ಟ್ ವಕೀಲ ಚಂದ್ರಮೌಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಸೇರಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಿವಿಧೆಡೆಯ ವಕೀಲರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಚಕ್ಕೇರ ಪಂಚಮ್ ತಂಡದವರು ರೈತ ಗೀತೆ ಹಾಡಿದರು. ವಿ.ಟಿ. ಶ್ರೀನಿವಾಸ್ ತಂಡದವರು ಪ್ರಾರ್ಥಿಸಿದರೆ, ರೇಖಾ ಶ್ರೀಧರ್ ತಂಡವರು ನಾಡಗೀತೆ ಹಾಡಿದರು. ಕೊಡಗು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಮಾಸ್ಟರ್ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮಿಜೀ ಸ್ವಾಗತಿಸಿದರು. ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಡಿ. ಕಾವೇರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆÇನ್ನಂಪೇಟೆ ವÀಕೀಲರ ಸಂಘದ ಕಾರ್ಯದರ್ಶಿ ಎಂ.ಟಿ. ಕಾರ್ಯಪ್ಪ ಮತ್ತು ಸಂಜೀವ್ ಕಾರ್ಯಕ್ರಮ ನಿರೂಪಿಸಿದರು. ವಕೀಲ ರಾಕೇಶ್ ವಂದಿಸಿದರು.