ಸೋಮವಾರಪೇಟೆ, ಡಿ. 26: ಜೀಪು ಮಗುಚಿಕೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕಿರಗಂದೂರು ಗ್ರಾಮದ ಬಾಗಿಲುಕಂಡಿ ಜಂಕ್ಷನ್ ನಲ್ಲಿ ಸಂಭವಿಸಿದೆ.

ತಾಕೇರಿ ಗ್ರಾಮದ ಪೂವಯ್ಯ, ಕಿರಗಂದೂರು ಗ್ರಾಮದ ಮಾದಪ್ಪ, ಚಾಲಕ ಸ್ವಾಮಿ ಗಾಯಗೊಂಡವರು. ಏರು ರಸ್ತೆಯಲ್ಲಿ ಜೀಪು ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ, ಹಿಂಬದಿ ಚಲಿಸಿ, ಮಗುಚಿಕೊಂಡಿದೆ. ಜೀಪು ಉರುಳಿದ ಸಂದರ್ಭ ಮರವೊಂದಕ್ಕೆ ತಡೆದು ನಿಂತಿದೆ. ಇಲ್ಲದಿದ್ದರೆ ಜೀಪು ಕಾಫಿ ತೋಟಕ್ಕೆ ಉರುಳಿ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಮಡಿಕೇರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.