*ಸಿದ್ದಾಪುರ, ಡಿ. 27: ಅಭ್ಯತ್‍ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನೆಲ್ಲಿಹುದಿಕೇರಿಯ ನೂತನ ಶಾಖೆ ತಾ. 28 ರಂದು ಲೋಕಾರ್ಪಣೆಗೊಳ್ಳಲಿದೆ. ಹಳೆಯ ಕಾಲದ ತೀರಾ ಶಿಥಿಲಾವಸ್ಥೆಯಲ್ಲಿದ್ದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ, ಕಟ್ಟಡವನ್ನು ಕೆಡವಿ ನೂತನವಾಗಿ ಸುಸಜ್ಜಿತವಾದ ಅಭ್ಯತ್‍ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನೆಲ್ಲಿಹುದಿಕೇರಿಯ ಕಟ್ಟಡ ತಲೆಎತ್ತಿ ನಿಂತಿದೆ. ಈ ಬ್ಯಾಂಕಿನಲ್ಲಿ 4 ದಶಕಗಳ ಕಾಲದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೊಂಗೇರ ಬೋಪಯ್ಯ ಹಾಗೂ ಆಡಳಿತ ಮಂಡಳಿಯವರ ಉತ್ತಮ ಸೇವೆಯಿಂದ ಬ್ಯಾಂಕ್ ಲಾಭದಲ್ಲಿ ನಡೆಯತ್ತಿತ್ತು. ಈಗ ನೂತನ ಕಟ್ಟಡ ಭಾಗ್ಯ ಲಭ್ಯವಾಗಿದೆ. ಅಲ್ಲದೆ ದವಸ ಭಂಡಾರ 7 ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗಿನ ಕೆಲ ವರ್ಷಗಳಿಂದ ರೈತರು ಭತ್ತ ಬೆಳೆಯುವದು ಕಡಿಮೆ ಮಾಡಿರುವದರಿಂದ ಕುಂಠಿತಗೊಂಡಿದ್ದರೂ ಹಳೆಗದ್ದೆ ಮಾದಪ್ಪ ಅಧ್ಯಕ್ಷತೆಯಲ್ಲಿ ಸತ್ಯನಾರಾಯಣ ದವಸ ಭಂಡಾರ ಸದಸ್ಯರುಗಳ ಸಹಕಾರದಿಂದ ಸೇವೆ ಸಲ್ಲಿಸುತ್ತಿದೆ. ಅಭ್ಯತ್‍ಮಂಗಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ 3 ಕಟ್ಟಡವನ್ನು ಸತ್ಯನಾರಾಯಣ ದವಸ ಭಂಡಾರ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ.