ಸೋಮವಾರಪೇಟೆ,ಡಿ.25: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಗ್ಯಾಸ್ ಸೌಲಭ್ಯವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗೂ ತಲುಪಿಸುವ ಮೂಲಕ ಎಲ್ಲಾ ಕುಟುಂಬಗಳಿಗೂ ಗ್ಯಾಸ್ ಸಂಪರ್ಕ ಕಲ್ಪಿಸಲಾಗುವದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್‍ಕಿಟ್ ವಿತರಿಸಿ ಮಾತನಾಡಿದ ಅವರು, 2011 ಜನಗಣತಿ ಆಧಾರದ ಮೇಲೆ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿ ಗಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಕೇಂದ್ರ ಸರ್ಕಾರವು ಗ್ಯಾಸ್ ಏಜೆನ್ಸಿಗಳ ಮೂಲಕ ವಿತರಿಸುತ್ತಿದೆ ಎಂದರು.

ಪಟ್ಟಿಯಲ್ಲಿ ಹಲವು ಫಲಾನುಭವಿಗಳ ಹೆಸರು ಇಲ್ಲದೇ ಇರುವದು ತಮ್ಮ ಗಮನಕ್ಕೆ ಬಂದಿದೆ. ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಫಲಾನುಭವಿಗಳಿಗೆ ಮುಂದಿನ ಹಂತದಲ್ಲಿ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ವಿತರಿಸಿ ಮಾತನಾಡಿದ ಅವರು, 2011 ಜನಗಣತಿ ಆಧಾರದ ಮೇಲೆ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿ ಗಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಕೇಂದ್ರ ಸರ್ಕಾರವು ಗ್ಯಾಸ್ ಏಜೆನ್ಸಿಗಳ ಮೂಲಕ ವಿತರಿಸುತ್ತಿದೆ ಎಂದರು.

ಪಟ್ಟಿಯಲ್ಲಿ ಹಲವು ಫಲಾನುಭವಿಗಳ ಹೆಸರು ಇಲ್ಲದೇ ಇರುವದು ತಮ್ಮ ಗಮನಕ್ಕೆ ಬಂದಿದೆ. ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಫಲಾನುಭವಿಗಳಿಗೆ ಮುಂದಿನ ಹಂತದಲ್ಲಿ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಬಗ್ಗೆ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಗಳಾದ ಎಂ.ಎಸ್.ಸತೀಶ್, ಅರುಣ್, ಆಕಾಶ್, ಕೆ.ಸತೀಶ್ ಅವರುಗಳು ಫಲಾನುಭವಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಲ್.ಎಚ್. ಕಾವೇರಮ್ಮ, ಉಪಾಧ್ಯಕ್ಷ ಕನ್ನಿಕಂಡ ಶ್ಯಾಮ್ ಸುಬ್ಬಯ್ಯ, ಸದಸ್ಯರುಗಳಾದ ರತಿ, ವಿಮಲ, ಬಿ.ಎನ್.ರಮೇಶ್, ಎ.ಎಸ್.ಸತೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ನಾಪಂಡ ಕಾಳಪ್ಪ, ಪಾರ್ವತಿ ಗ್ಯಾಸ್ ಏಜೆನ್ಸಿ ಮಾಲೀಕ ಎಸ್. ಎ. ಮುರಳೀಧರ್ ಉಪಸ್ಥಿತರಿದ್ದರು.