ಕುಶಾಲನಗರ, ಡಿ. 25: ಕುಶಾಲನಗರ ಹಿಂದು ರುದ್ರ ಭೂಮಿ ಕಾವಲುಗಾರ ಪ್ರದೀಪ್ ಅವರ ಅಕಾಲಿಕ ಮರಣ ಹಿನ್ನೆಲೆ ಸ್ಥಳೀಯ ಗಣಪತಿ ದೇವಾಲಯ ಆಶ್ರಯದಲ್ಲಿ ಕುಶಾಲನಗರ ಹಿಂದು ರುದ್ರಭೂಮಿ ಸಮಿತಿ ಪ್ರಮುಖರ ಸಭೆ ನಡೆದು ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಮಾರುಕಟ್ಟೆ ರಸ್ತೆಯ ಬದಿಯಲ್ಲಿರುವ ಹಿಂದು ರುದ್ರ ಭೂಮಿಯ ಕಾವಲುಗಾರನಾಗಿ ಕಳೆದ ಕೆಲವು ವರ್ಷಗಳಿಂದ ವಿಶೇಷವಾಗಿ ಸೇವೆ ಸಲ್ಲಿಸಿದ ಪ್ರದೀಪ್ ಇತ್ತೀಚೆಗಷ್ಟೆ ವಾಹನ ಅಪಘಾತವೊಂದರಲ್ಲಿ ಮೃತ್ಯುಗೆ ಈಡಾಗಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಂಬಂಧ ಜನವರಿ 4 ರಂದು ಸ್ಥಳೀಯ ದೇವಾಲಯ ಒಕ್ಕೂಟ ಗಳ ಸಮಿತಿ, ಸಂಘ-ಸಂಸ್ಥೆಗಳು ಹಾಗೂ ಹಿಂದು ರುದ್ರಭೂಮಿ ಸಮಿತಿ ಪ್ರಮುಖರ ಸಭೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಗಣಪತಿ ದೇವಾಲಯದ ಅರ್ಚಕರಾದ ಆರ್.ಕೆ. ನಾಗೇಂದ್ರ, ದೇವಾಲಯ ಮತ್ತು ಹಿಂದು ರುದ್ರಭೂಮಿ ಸಮಿತಿಗಳ ಪ್ರಮುಖರು, ನಾಗರಿಕರು ಇದ್ದರು.