ಭಾಗಮಂಡಲ, ಡಿ. 25: ಭಾಗಮಂಡಲದಲ್ಲಿ ಅಯ್ಯಪ್ಪ ವ್ರತಧಾರಿಗಳಿಂದ ಮಂಡಲಪೂಜೆ ಜರುಗಿತು. ಭಾಗಮಂಡಲದ ಅಯ್ಯಪ್ಪ ಬನದಿಂದ ಮಾಲಾಧಾರಿಗಳು ಮೆರವಣಿಗೆಯೊಂದಿಗೆ ಪಟ್ಟಣದಲ್ಲಿ ಸಾಗಿಬಂದು ತ್ರಿವೇಣಿ ಸಂಗಮದಲ್ಲಿ ಮಂಡಲಪೂಜೆ ನೆರವೇರಿಸಿದರು.ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗುರುಸ್ವಾಮಿಗಳಾದ ಜಯನ್, ವಸಂತ, ದಾಮೋದರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.