ಮಡಿಕೇರಿ, ಡಿ. 25: ಮಣ್ಣಿನ ಮಕ್ಕಳನ್ನು ವಂಚಿಸಲು ಯಾರಿಂದಲೂ ಅಸಾಧ್ಯವಾಗಿದ್ದು, ಅಪಾರವಾದ ವ್ಯವಹಾರಿಕ ಜ್ಞಾನವನ್ನು ಕೃಷಿಕ ವರ್ಗ ಹೊಂದಿರುತ್ತಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್‍ನ ರೋಟರ್ಯಾಕ್ಟ್ ಸಮಿತಿ ಅಧ್ಯಕ್ಷ ಎಂ.ಧನಂಜಯ್ ಹೇಳಿದ್ದಾರೆ.
ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ನಾಪೆÇೀಕ್ಲು ಪ್ರೌಢಶಾಲೆ, ರೋಟರಿ ಮಿಸ್ಟಿ ಹಿಲ್ಸ್, ಪ್ರೌಢಶಾಲಾ ರೋಟರಿ ಇಂಟರ್ಯಾಕ್ಟ್ ಕ್ಲಬ್‍ಗಳ ಸಂಯುಕ್ತಾಶ್ರಯದಲ್ಲಿ ನಾಪೆÇೀಕ್ಲು ಪ್ರೌಢಶಾಲೆಯಲ್ಲಿ ಆಯೋಜಿತ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾಪೆÇೀಕ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕಾವೇರಿ ಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಯಾರೂ ಕೀಳರಿಮೆ ಹೊಂದಿರಬಾರದು. ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ಬೇಧದ ದಿನಗಳು ಈಗಿಲ್ಲ ಎಂದರು.
ಮೈಸೂರಿನ ಗ್ರಾಹಕರ ಪರಿಷತ್ ಸಂಚಾಲಕ ಸಿ.ವಿ.ನಾಗರಾಜ್, ಖರೀದಿಸುವ ವಸ್ತುಗಳಲ್ಲಿನ ಕಲಬೆರಕೆ ತಿಳಿಯದೇ ಗ್ರಾಹಕರು ಯಾವೆಲ್ಲಾ ರೀತಿ ಮೋಸ ಹೋಗುತ್ತಾರೆ ಎಂದು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಅಜ್ಜೀರಂಡ ಚಂಗಪ್ಪ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಕುಲ್ಲೇಟಿರ ಅಜಿತ್ ನಾಣಯ್ಯ, ಉಪಪ್ರಾಂಶುಪಾಲೆ ಪಿ.ಕೆ. ನಳಿನಿ, ಕೆ.ಎಂ.ಗಿರೀಶ್, ಶ್ರೀರಾಮಟ್ರಸ್ಟ್ ಶಾಲೆಯ ಪ್ರಾಂಶುಪಾಲೆ ಬಿ.ಎಂ.ಶಾರದಾ, ಶಿಕ್ಷಕಿ ಬಿ.ಆರ್.ಸುಬ್ಬಮ್ಮ, ಇಂಟರ್ಯಾಕ್ಟ್ ಕ್ಲಬ್ ಸಂಯೋಜಕಿ ಕೆ.ಬಿ.ಉಷಾರಾಣಿ ಪಾಲ್ಗೊಂಡಿದ್ದರು.