ವೀರಾಜಪೇಟೆ, ಡಿ. 25: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಅಯ್ಯಪ್ಪ ಭಗವತಿ ದೇವಸ್ಥಾನಕ್ಕೆ ವರ್ಷಂಪ್ರತಿ ಬರುವ ಬೈತೂರು ದೇವರು ತಾ.30 ರಂದು ಆಗಮಿಸಿ ತಂಗಲಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬೋಪಣ್ಣ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೋಪಣ್ಣ ಅವರು ತಾ. 31ರಂದು ದೇವರಿಗೆ ವಿಶೇಷ ಮಹಾ ಪೂಜಾ ಸೇವೆ ಹಾಗೂ ದೇವರಿಂದ ಆಶೀರ್ವಚನ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.