ಸುಂಟಿಕೊಪ್ಪ,ಡಿ.24: ಸುಂಟಿಕೊಪ್ಪದ ಶ್ರೀಪುರಂ ಅಯ್ಯಪ್ಪ ಕ್ಷೇತ್ರದ 47ನೇ ವಾರ್ಷಿಕ ಮಂಡಲ ಪೂಜೋತ್ಸವವು ತಾ.26 ರಂದು ನಡೆಯಲಿದೆ. ತಾ 26 ರಂದು ಪೂರ್ವಾಹ್ನ 6.45 ಗಂಟೆಗೆ 12 ತೆಂಗಿನಕಾಯಿಗಳ ಗಣಪತಿಹೋಮ, ಪೂರ್ವಾಹ್ನ 7.30 ಗಂಟೆಗೆ ಚಂಡೆಮೇಳ, 8 ಗಂಟೆಗೆ ಗಣಪತಿ ಹೋಮ, 9 ಗಂಟೆಗೆ ಸ್ವಾಮಿಗೆ ಪಂಚಾಮೃತಾಭೀಷೇಕ, 12 ಗಂಟೆಗೆ ಸ್ವಾಮಿಗೆ ಪೂಜೆ, 12.30 ಗಂಟೆಗೆ ಸ್ವಾಮಿಗೆ ಲಕ್ಷಾರ್ಚನೆ,ಪಲ್ಲಪೂಜೆ, ಅಪರಾಹ್ನ 1 ಗಂಟೆಗೆ ಪಟಾಕಿ ಪ್ರದರ್ಶನ, ಬಿಲ್ವಪತ್ರೆ ಆರ್ಚನೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ನಡೆಯಲಿದೆ. ಅಪರಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಅನ್ನ ಸಂತರ್ಪಣೆ, ssಸಂಜೆ 6 ಗಂಟೆಗೆ ವಿದ್ಯುತ್ ದೀಪಾಲಂಕೃತವಾದ ಭವ್ಯ ಮಂಟಪದಲ್ಲಿ ಚಂಡೆ ಮೇಳದೊಂದಿಗೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಎಂ.ಟಿ.ಧನುಕಾವೇರಪ್ಪ, ಪ್ರಧಾನಕಾರ್ಯದರ್ಶಿ ಸುರೇಶ್‍ಗೋಪಿ ತಿಳಿಸಿದ್ದಾರೆ.