ಸೋಮವಾರಪೇಟೆ, ಡಿ. 24: ಇಲ್ಲಿಗೆ ಸಮೀಪದ ಕಲ್ಕಂದೂರು ಗ್ರಾಮದ ಶ್ರೀ ಶಾಸ್ತ ಯುವಕ ಸಂಘದ ಸದಸ್ಯರುಗಳು ರಾಜ್ಯ ಹೆದ್ದಾರಿ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛ ಮಾಡುವ ಮೂಲಕ ಶ್ರಮದಾನ ಮಾಡಿದರು.ಸಂಘದ ಸದಸ್ಯರುಗಳು ಹಾಗೂ ಗ್ರಾಮಸ್ಥರುಗಳು ಕಲ್ಕಂದೂರು ಗ್ರಾಮದ ಜಂಕ್ಷನ್ ಬಳಿಯಿಂದ ಆಲೆಕಟ್ಟೆ ರಸ್ತೆವರೆಗಿನ ಸುಮಾರು 1 ಕಿ.ಮೀ. ಉದ್ದದ ರಸ್ತೆಯ ಆಸುಪಾಸಿನ ಬೇಲಿ ಸೇರಿದಂತೆ ಗಿಡಗಂಟಿಗಳನ್ನು ಕಡಿದು ಸ್ವಚ್ಛತಾ ಕಾರ್ಯ ಮಾಡಿದರು.

ಸ್ವಚ್ಛತಾ ಕಾರ್ಯದಲ್ಲಿ ಯುವಕ ಸಂಘದ ಅಧ್ಯಕ್ಷ ಸಿ.ಎನ್. ಲೋಕೇಶ್, ಕಾರ್ಯದರ್ಶಿ ಕೆ.ಬಿ. ಹರೀಶ್, ಖಜಾಂಚಿ ಕೆ.ಎಸ್. ಶಿವಕುಮಾರ್ ಸೇರಿದಂತೆ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.