ಮಡಿಕೇರಿ, ಡಿ. 24: ಲಕ್ಕಿ ಫ್ರೆಂಡ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಹೊಸ ವರ್ಷಾಚರಣೆÉ ಪ್ರಯುಕ್ತ ತಾ. 31 ರಂದು ಕುಂಜಿಲ ಗ್ರಾಮದ ಶಾಲಾ ಮೈದಾನದಲ್ಲಿ 4ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಕ್ಲಬ್ ಪದಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿ, ವಾಲಿಬಾಲ್ ಪಂದ್ಯಾವಳಿ ಅಂದು ಸಂಜೆ 5 ಗಂಟೆಗೆ ಆರಂಭಗೊಂಡು ಅಹೋ ರಾತ್ರಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ 30 ಕ್ಕೂ ಹೆಚ್ಚಿನ ತಂಡ ಗಳು ಪಾಲ್ಗೊ ಳ್ಳುವ ನಿರೀಕ್ಷೆ ಹೊಂದಲಾಗಿ ದೆಯೆಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಸಕ್ತವಾಗಿರುವ ತಂಡಗಳ ಹೆಸರು ನೋಂದಾವಣೆಗೆ ತಾ. 29 ಕೊನೆಯ ದಿನಾಂಕವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.9686770819, 9481743990 ನ್ನು ಸಂಪರ್ಕಿಸಬಹುದಾಗಿದೆಯೆಂದು ತಿಳಿಸಿದರು. ಪಂದ್ಯಾವಳಿ ವಿಜೇತ ತಂಡಕ್ಕೆ 18 ಸಾವಿರ ರೂ. ನಗದು, ದ್ವಿತೀಯ ಸ್ಥಾನಿ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಎರಡೂ ತಂಡಗಳಿಗೂ ಆಕರ್ಷಕ ಪಾರಿತೋಷಕ ಗಳನ್ನು ನೀಡಲಾಗುತ್ತದೆಂದು ಮಾಹಿತಿಯನ್ನಿತ್ತರು.
ಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿಗಳಾದ ಆಶಿಖ್ ಎಂ.ಹೆಚ್., ಸಿರಾಜ್ ವಯಕೋಲ್, ಸದಸ್ಯರುಗಳಾದ ಡಿ.ಜೆ.ಮೊಹಮ್ಮದ್ ಜಾಬೀರ್, ಕೆ.ಎಂ. ಮೊಹಮ್ಮದ್ ಜಾಬೀರ್ ಉಪಸ್ಥಿತರಿದ್ದರು.