ಸೋಮವಾರಪೇಟೆ, ಡಿ. 21: ಪ್ರಜ್ಞಾವಂತ ಸಮಾಜದಿಂದ ಮಾತ್ರ ಕೌಟುಂಬಿಕ ಮೌಲ್ಯಗಳ ರಕ್ಷಣೆ ಸಾಧ್ಯ. ಈ ದಿಸೆಯಲ್ಲಿ ಸಮಾಜದ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಪುತ್ತೂರು ವಿವೇಕಾನಂದ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಅಭಿಪ್ರಾಯಿಸಿದರು.
ಸೋಮವಾರಪೇಟೆಯ ಸಾಮರಸ್ಯ ವೇದಿಕೆಯ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕೌಟುಂಬಿಕ ಮೌಲ್ಯಗಳು ವಿಷಯದ ಬಗೆಗಿನ ಸದ್ಭಾವನಾ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಟುಂಬದ ಮೌಲ್ಯಗಳು ಉಳಿದಿರುವದು ಭಾರತದಲ್ಲಿ ಮಾತ್ರ. ಲಕ್ಷಾಂತರ ವಿದೇಶೀ ಸಂಶೋಧನಾ ಕಾರರಿಗೂ ಭಾರತೀಯ ಕುಟುಂಬ ಪದ್ದತಿ ವಿಶೇಷವೆಂಬಂತೆ ಕಂಡಿತ್ತು. ಅತ್ಯಂತ ಶ್ರೀಮಂತಿಕೆಯ ಕೌಟುಂಬಿಕ ಪದ್ಧತಿ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಪಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗಿ ನಮ್ಮ ನೆಲದ ಸಂಸ್ಕøತಿಯನ್ನು ಮರೆಯುತ್ತಿದ್ದೇವೆ ಎಂದು ರವೀಂದ್ರ ವಿಷಾಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಜಾನನ ಗ್ಯಾಸ್ ಸರ್ವಿಸ್‍ನ ಮಾಲೀಕರಾದ ಪಿ.ಕೆ. ರವಿ ವಹಿಸಿ ಮಾತನಾಡಿ, ಭಾಷೆ ಎಂಬದು ಸಂಸ್ಕøತಿಯ ಕೊಂಡಿಯಾಗಿದ್ದು, ಸ್ವಭಾಷೆಯನ್ನು ಮನೆಯಲ್ಲಿ ಹೆಚ್ಚು ಬಳಸಬೇಕು. ನಮ್ಮತನವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಭಜನಾ ತಂಡದ ಪಂಕಜಾ ಶ್ಯಾಂ ಸುಂದರ್, ಕಸಾಪ ಅಧ್ಯಕ್ಷ ವಿಜೇತ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್, ಅರ್ಚಕರ ಸಂಘದ ಅಧ್ಯಕ್ಷ ಮೋಹನ್ ಮೂರ್ತಿ, ಮೊಗೇರ ಸಮಾಜದ ಅಧ್ಯಕ್ಷ ದಾಮೋದÀರ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ್, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿಗಣೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.