ಸಿದ್ದಾಪುರ, ಡಿ. 21: ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಮತ್ತು ಮಕ್ಕಳ ದಿನಾಚರಣೆ ನಡೆಯಿತು. ಬೆಟ್ಟದಕಾಡುವಿನ ನಾಡ ಹಬ್ಬ ಕಚೇರಿಯಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸಫಿಯ ಮುಹಮ್ಮದ್ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಆಟೋಟ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸತತ ಮೂರು ಬಾರಿ ಗ್ರಾ.ಪಂ.ಗೆ ಆಯ್ಕೆಯಾದ ಗ್ರಾಮಸ್ಥೆ ಸಫಿಯಾ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಯಶೋಧ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸೋಮವಾರ ಪೇಟೆ ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ಸ್ವಾಗತ ಸಮಿತಿ ಅಧ್ಯಕ್ಷ ಎನ್.ಸಿ. ಚಂದ್ರಕುಮಾರ್, ಗ್ರಾ.ಪಂ. ಸದಸ್ಯ ಹನೀಫ್, ಯೋಗೇಶ್, ಅನ್ನಮ್ಮ ಮರಿಯ, ಟಿ.ಬಿ. ತಿಮ್ಮಯ್ಯ, ಎ.ಜೆ. ಥಾಮಸ್, ನಾಡ ಹಬ್ಬ ಸಮಿತಿ ಅಧ್ಯಕ್ಷ ಟಿ.ಎಂ. ಜೋಸೆಫ್, ಪಿ.ಎ. ಅಬ್ದುಲ್ ರಜಾಕ್, ಟಿ.ಕೆ. ಮೋಹನ್ ದಾಸ್, ಚಂದ್ರನ್ ನಾಯರ್ ಮತ್ತು ಇತರರು ಇದ್ದರು.