ಮಡಿಕೇರಿ, ಡಿ. 21: ಕೊಡಗರಹಳ್ಳಿ ಗ್ರಾಮದ ಶ್ರೀ ಬೈತೂರಪ್ಪ ಪೊವ್ವದಿ ಕ್ಷೇತ್ರದ ಪುನರ್ ಪ್ರತಿಷ್ಠಾ ಆರನೇ ವಾರ್ಷಿಕೋತ್ಸವ ತಾ. 24ರಂದು ನಡೆಯಲಿದೆ.

ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹೋಮ, 8 ಗಂಟೆಯಿಂದ ಶ್ರೀ ಶತರುದ್ರಾಭಿಷೇಕ, 9ಕ್ಕೆ ಶ್ರೀ ಚಂಡಿಕಾ ಹೋಮ, 11ಕ್ಕೆ ನವಗ್ರಹಗಳಿಗೆ ವಿಶೇಷ ಕಲಶಾಭಿಷೇಕ ಪೂಜೆ, 11.30ಕ್ಕೆ ನಾಗದೇವರಿಗೆ ವಿಶೇಷ ಪೂಜೆ, 12ಕ್ಕೆ ಮಹಾಪೂಜೆ- ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಯಿಂದ ಅನ್ನ ಸಂತರ್ಪಣೆ ಜರುಗಲಿದೆ.