ಕರಿಕೆ, ಡಿ. 21: ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕೋತಿಗಳ ದಾಂಧಲೆ ವಿಪರೀತವಾಗಿದ್ದು, ರೈತರು ಬೆಳೆದ ಗೇರು, ಅಡಿಕೆ, ಬಾಳೆ, ಕಾಳುಮೆಣಸು, ಸೇರಿದಂತೆ ಎಳನೀರು ಕುಡಿಯುತ್ತಿದ್ದು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಲಕ್ಷಾಂತರ ರೂಪಾಯಿಗಳ ಬೆಳೆ ನಾಶಪಡಿಸಿದೆ.ಗ್ರಾಮದ ಚೆತ್ತುಕಾಯ, ದೊಡ್ಡಚೇರಿ, ಎಳ್ಳುಕೊಚ್ಚಿ ಭಾಗದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಕೋತಿಗಳು ಬೀಡು ಬಿಟ್ಟಿದ್ದು ಪಟಾಕಿ ಸಿಡಿಸಿದರೂ ಬೆದರದೆ ಬೆಳಿಗ್ಗೆಯಿಂದ ಸಂಜೆ ತನಕ ತೋಟಗಳಿಗೆ ಲಗ್ಗೆಯಿಟ್ಟು ದಾಂಧಲೆ ನಡೆಸಿ ಫಸಲನ್ನು ತಿಂದು ಹಾಕುತ್ತಿವೆ. ಒಂದೆಡೆ ಬೆಳೆಗಾರರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಪರದಾಡುತ್ತಿದ್ದು ಇದೀಗ ಕೋತಿಗಳ ಕಾಟದಿಂದ ಹೈರಾಣಾಗಿದ್ದು ಅರಣ್ಯ ಇಲಾಖೆ ಕೋತಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಗ್ರಾಮಸ್ಥರ ಬೆಳೆ ರಕ್ಷಣೆ ಮಾಡಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
- ಹೊದ್ದೆಟ್ಟಿ ಸುಧೀರ್