ಕುಶಾಲನಗರ, ಡಿ. 21: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡ್‍ಗಾವ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಮೆವಾನಿ ಗೆಲುವು ಸಾಧಿಸಿದ ಹಿನ್ನೆಲೆ ಎಸ್‍ಡಿಪಿಐ ಹಾಗೂ ಡಿಎಸ್‍ಎಸ್ ವತಿ ಯಿಂದ ಕುಶಾಲನಗರ ದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ಒಳರೋಗಿಗಳಿಗೆ ರಾತ್ರಿ ವೇಳೆ ಊಟವನ್ನು ವಿತರಿಸುವ ಮೂಲಕ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಎಸ್‍ಡಿಪಿಐ ನಗರ ಉಪಾಧ್ಯಕ್ಷ ಭಾಷಾ, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ರಾಜು, ಪ್ರಮುಖರಾದ ಆಬಿದ್, ಮನ್ಸೂರ್, ಝಕ್ರಿಯ, ರಶೀದ್, ಹನೀಫ್, ಕ್ಯಾಂಪಸ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿ ರಮೀಜ್, ಮಂಜಿರ್ ಮತ್ತಿತರರು ಇದ್ದರು.