ಕೂಡಿಗೆ, ಡಿ. 21: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರ ಆದೇಶದನ್ವಯ ಜಿಲ್ಲೆಯ ಪಕ್ಷದ ಎಲ್ಲಾ ಪ್ರಮುಖರು ಎರಡೆರಡು ಬೂತ್ ಘಟಕಗಳಲ್ಲಿ ಸಶಕ್ತೀಕರಣದ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯ ಕಾರ್ಯನಿರ್ವಹಿಸ ಬೇಕು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಹೇಳಿದರು.

ಕುಶಾಲನಗರ ಸಮೀಪದ ಮಾದಾಪಟ್ಟಣದಲ್ಲಿ ನಡೆದ ಬಿಜೆಪಿ ಬೂತ್ ಸಶಕ್ತೀಕರಣ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಪ್ರಾರಂಭಕ್ಕು ಮುನ್ನ ಮದಾಪಟ್ಟಣ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷ ಸುರೇಶ್‍ಯವರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸಲಾಯಿತು. ನಂತರ ಸಭೆಯ ನಡೆಸಲಾಯಿತು.

ಸಭೆಯಲ್ಲಿ ಬೂತ್ ಸದಸ್ಯರು, ಬಿಎಲ್‍ಎ 2 ಸದಸ್ಯರಾದ ಪ್ರವೀದ್, ಪುಷ್ಪನಾಗೇಶ್, ಮಣಿಕುಮಾರ್, ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗೇಶ್, ತಾ.ಪಂ. ಮಾಜಿ ಸದಸ್ಯ ಸತೀಶ್, ಯುವಕ ಸಂಘದ ಅಧ್ಯಕ್ಷರು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.