ಮಡಿಕೇರಿ, ಡಿ. 21: ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮದರಸ ಸಮಿತಿಯ ವಾರ್ಷಿಕ ಮಹಾಸಭೆಯನ್ನು ತಾ. 15 ರಂದು ಅಬುಧಾಬಿಯಾ ಎಕ್ಸಿವಿಶನ್ ಸೆಂಟರ್‍ನಲ್ಲಿ ಅಧ್ಯಕ್ಷ ಎಂ.ಎ. ಹಂಸ ಅಧ್ಯಕ್ಷತೆಯಲ್ಲಿ ಹಾಗೂ ಉದ್ಘಾಟನೆಯನ್ನು ಮಜೀದ್ ಸಹದಿ ನಿರ್ವಹಿಸಿದರು.
ಈ ಸಂದರ್ಭ ಧಾರ್ಮಿಕ ವಿದ್ಯಾಭ್ಯಾಸದ ಬಗ್ಗೆ ಮತ್ತು ಮುಂದೆ ನಡೆಯಬೇಕಾದ ಕಾರ್ಯಯೋಜನೆಯ ಕುರಿತು ಸಅದಿ ಉಸ್ತಾದ್ ವಿವರಣೆ ನೀಡಿದರು. ಕಳೆದ ಸಾಲಿನಲ್ಲಿ ನಡೆದಂತಹ ಕಾರ್ಯಕ್ರಮದ ಕುರಿತು ವರದಿಯನ್ನು ಪ್ರಧಾನ ಕಾರ್ಯದರ್ಶಿ ಸಿ.ಎ. ಅಶ್ರಫ್ ಮಂಡಿಸಿದರು.
ಊರಿನ ಹಿರಿಯರು ಹಲವಾರು ವರ್ಷಗಳಿಂದ ಯು.ಎ.ಇ.ಯಲ್ಲಿ ನೆಲೆಸಿ ಸಂಘಟನೆಗೆ ನೇತೃತ್ವ ನೀಡುತ್ತಿರುವ ಯೂಸೆಫ್ ಬೆಳ್ಳುಮಾಡು ಅವರನ್ನು ಸನ್ಮಾನಿಸಯಿತು. ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎ. ಹಂಸ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಿ.ಎ. ಅಶ್ರಫ್ ಅವರನ್ನು ಮತ್ತು ಮದರಸದ ಯು.ಎ.ಇ.ಯಾ ಕಾರ್ಯಕ್ರಮಗಳಿಗೆ ನೇತೃತ್ವ ನೀಡುವ ಮಜೀದ್ ಸಅದಿ ಉಸ್ತಾದ್ ಹಾಗೂ ರಶೀದ್ ಅಶ್ರಫಿ ಉಸ್ತಾದರಿಗೆ ಸನ್ಮಾನಿಸಲಾಯಿತು.
ಸ್ವಾಗತವನ್ನು ರಶೀದ್ ಅಶ್ರಫಿ ಹಾಗೂ ಟಿ.ಕೆ. ಮುಜೀಬ್ ವಂದನೆ ಸಲ್ಲಿಸಿದರು. ನೂತನ ಅಧ್ಯಕ್ಷರಾಗಿ ಎಂ.ಎ. ಹಂಸ, ಸಲಹಾ ಮಂಡಳಿಯ ಅಧ್ಯಕ್ಷರಾಗಿ ಯೂಸೆಫ್ ಬೆಳ್ಳುಮಾಡು, ಉಪಾಧ್ಯಕ್ಷರಾಗಿ ರಶೀದ್ ಅಶ್ರಫಿ ಹಾಗೂ ಮಜೀದ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ಅಶ್ರಫ್, ಸಹ ಕಾರ್ಯದರ್ಶಿಯಾಗಿ ಪಿ.ಎಂ. ನಾಸರ್ ಮತ್ತು ಸೈನುದ್ದೀನ್ ಬೇತ್ರಿ (ಅಬುಧಾಬಿ), ಎನ್.ಎಂ. ನಿಸಾರ್ (ಶಾರ್ಜ) ಹಾಗೂ ಖಜಾಂಚಿಯಾಗಿ ರಶೀದ್‍ಐ.ಬಿ.ಎಂ. ಸಂಚಾಲಕರಾಗಿ ಷಂಶುದ್ದೀನ್ ಕಲ್ಲುಮೊಟ್ಟೆ ಜಿ.ಸಿ.ಸಿ. ಸಂಯೋಜಕರಾಗಿ ಟಿ.ಕೆ. ಮುಜೀಬ್ ಹಾಗೂ ಕಮಿಟಿ ಸದಸ್ಯರಾಗಿ ಪಿ.ಎಂ. ರೌಫ್, ಅಶ್ರಫ್ ಸೆಟ್ ಅವರನ್ನು ಆಯ್ಕೆ ಮಾಡಲಾಯಿತು.