ಶನಿವಾರಸಂತೆ, ಡಿ. 20: ಹಂಡ್ಲಿ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಫಿ ಹಣ್ಣು ಕುಯ್ಯುತ್ತಿದ್ದ ಕೂಲಿ ಕಾರ್ಮಿಕ ಯುವತಿಯೊಬ್ಬಳಿಗೆ ಬಲದ ಕಾಲಿನ ಕಿರುಬೆರಳಿಗೆ ಕಪ್ಪುಬಣ್ಣದ ಹಾವೊಂದು ಕಚ್ಚಿದ ಘಟನೆ ನಡೆದಿದೆ.
ಅರಕಲಗೋಡು ತಾಲೂಕಿನ ಬಿಟ್ಟಗೊಂಡನ ಹಳ್ಳಿಯ ನಿವಾಸಿ ಕೂಲಿ ಕಾರ್ಮಿಕೆ ಮಮತ (19) ತನ್ನ ತಾಯಿ ಶಾರದಳೊಂದಿಗೆ ಹಂಡ್ಲಿ ಗ್ರಾಮದ ಲತ್ತೇಶ್ ಅವರ ಕಾಫಿ ತೋಟದಲ್ಲಿ 4 ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಕಾಫಿ ತೋಟದಲ್ಲಿ ಕಾಫಿ ಹಣ್ಣು ಕುಯ್ಯುತ್ತಿದ್ದಾಗ, ಕಾಲಿನ ಬೆರಳಿಗೆ ಹಾವೊಂದು ಕಚ್ಚಿದೆ. ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.