ಮಡಿಕೇರಿ, ಡಿ. 20: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಶ್ರೀ ಅಯ್ಯಪ್ಪ ದೇವಾಲಯದ ಆವರಣದಲ್ಲಿ ತಾ. 23ರಂದು ಉಷಾಕಾಲ 5.30ರಿಂದ ತಾ. 24ರ ಬೆಳಗ್ಗಿನ ಜಾವ ತನಕ ದೇವತಾ ಕೈಂಕರ್ಯಗಳೊಂದಿಗೆ ದೀಪಾರಾಧನಾ ಉತ್ಸವ ಜರುಗಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ತಾ. 23ರ ಬೆಳಗ್ಗಿನ ಜಾವ 5.30ರಿಂದ ಗಣಪತಿ ಹೋಮದೊಂದಿಗೆ ಪ್ರತಿಷ್ಠಾಪನಾ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ, ಮಹಾಪೂಜೆ, ತಾಯಂಬಕ ಸೇವೆ, ಉತ್ಸವ ಮೂರ್ತಿ ಮೆರವಣಿಗೆ ಮಧ್ಯಾಹ್ನ 2 ಗಂಟೆ ಬಳಿಕ ಜರುಗಲಿದೆ. ಸಂಜೆ 6 ಗಂಟೆಯಿಂದ ದೀಪಾರಾಧನೆ, ಅಯ್ಯಪ್ಪಪೂಜೆ, ದುರ್ಗಾಪೂಜೆಯೊಂದಿಗೆ ಮಧ್ಯರಾತ್ರಿ ಅಗ್ನಿಪೂಜೆ ಹಾಗೂ ಬೆಳಗ್ಗಿನ ಜಾವ ಪೊಲಿಪಾಟ್, ಇತ್ಯಾದಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.