ಮಡಿಕೇರಿ, ಡಿ. 20: ಬೆಂಗಳೂರು ಕೊಡವ ಸಮಾಜದ ಶಿಕ್ಷಣ ಸಂಸ್ಥೆ ಇಂದಿರಾ ನಗರದ ಕಾವೇರಿ ಶಾಲೆಯಲ್ಲಿ ತಾ. 22ರಂದು 35ನೇ ವಾರ್ಷಿಕೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
*ಚೆಟ್ಟಳ್ಳಿ ಪ್ರೌಢಶಾಲೆಯ ವಾರ್ಷಿಕೋತ್ಸವ ತಾ. 22ರಂದು ಬೆಳಿಗ್ಗೆ 9.30ಕ್ಕೆ ಕ್ರೀಡೋತ್ಸವ ಉದ್ಘಾಟನೆಯೊಂದಿಗೆ ಆರಂಭಗೊಂಡು, ಅಪರಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಪಿ. ಜಯಾನಂದ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
*ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮಡಿಕೇರಿಯ ವಾರ್ಷಿಕೋತ್ಸವ ಕ್ರೀಡಾಕೂಟ ತಾ. 23ರಂದು ಬೆಳಿಗ್ಗೆ 9.30ರಿಂದ ಆರಂಭಗೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಪಾಲ್ಗೊಳ್ಳಲಿದ್ದಾರೆ. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
*ಸಂಪಾಜೆ ಶಿಕ್ಷಣ ಸಂಸ್ಥೆಯ ಪ.ಪೂ. ಕಾಲೇಜು ವಾರ್ಷಿಕೋತ್ಸವ ತಾ.23ರಂದು ಬೆಳಿಗ್ಗೆ 9.30ರಿಂದ ಆರಂಭಗೊಂಡು ಸಂಸ್ಥೆ ಅಧ್ಯಕ್ಷ ಕೆ.ಜಿ. ರಾಜಾರಾಂ ಅಧ್ಯಕ್ಷತೆಯಲ್ಲಿ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
*ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಶಿಕ್ಷಣ ಸಂಸ್ಥೆಯ 22ನೇ ವಾರ್ಷಿಕೋತ್ಸವ ಸಂಸ್ಥೆಯ ಅಧ್ಯಕ್ಷ ಎಂ.ಎಂ. ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮೈಂಡ್‍ಸೆಟ್ ನಿರ್ದೇಶಕ ಫಾ. ಸಿ.ಜೆ. ಜೋಸೆಫ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ತಾ. 23ರಂದು ಮಧ್ಯಾಹ್ನ 2.30ಕ್ಕೆ ಸಭಾ ಕಾರ್ಯಕ್ರಮ ನೆರವೇರಲಿದೆ.