ವೀರಾಜಪೇಟೆ, ಡಿ. 20: ಕ್ಲೀನ್ ಕೂರ್ಗ್ ಇನಿಷೀಯೇಟೀವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಗ್ಗುಲದ ದಂತ ವೈದ್ಯ ಕಾಲೇಜು ಹಾಗೂ ವೀರಾಜಪೇಟೆ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಂದು ಇಲ್ಲಿನ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ಪುರಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆಯಲ್ಲಿ ಪೌರ ಕಾರ್ಮಿಕರಿಗೆ ಆರೋಗ್ಯದ ವಿವಿಧ ಪರೀಕ್ಷೆಗಳು ಹಾಗೂ ದಂತ ಪರೀಕ್ಷೆಯನ್ನು ನಡೆಸಲಾಯಿತು. ಈ ಸಂದರ್ಭ ವೀರಾಜಪೇಟೆ ಪಟ್ಟಣ ಪಂಚಾಯಿತಿ ಶುಚಿತ್ವ ವಿಭಾಗದಲ್ಲಿ ದಕ್ಷ ಸೇವೆ ಸಲ್ಲಿಸುತ್ತಿರುವ ಹೆಚ್.ಎ. ರಾಧಾ, ಹೆಚ್.ಎಂ. ಶಂಕರ್, ಹೆಚ್.ಪಿ. ನಾಗಮಣಿ ಇವರುಗಳನ್ನು ಸನ್ಮಾನಿಸಲಾಯಿತು.

ಉಚಿತ ಆರೋಗ್ಯದ ತಪಾಸಣೆ ಶಿಬಿರದ ಉದ್ಘಾಟನೆಯನ್ನು ಅನಿಲ್ ಧವನ್ ನೆರವೇರಿಸಿದರು. ಈ ಸಂದರ್ಭ ದಂತ ವೈದ್ಯ ಕಾಲೇಜಿನ ಜಿತೇಶ್ ಜೈನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಮಾಜಿ ಅಧ್ಯಕ್ಷೆ ಮನೆಯಪಂಡ. ಕೆ. ದೇಚಮ್ಮ, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಪಟ್ಟಡ ವಿಕ್ರಂ, ಚೇಂಬರ್ ಆಫ್ ಕಾಮರ್ಸ್ ಮೂರ್ನಾಡು ಶಾಖೆಯ ಬಿ. ಅರುಣ್, ವಕೀಲೆ ಸಿಂಧೂರ್ ಇನಿಷೀಯೇಟಿವ್ ಸಂಸ್ಥೆಯ ಮುಕ್ಕಾಟಿರ ಕಾರ್ಯಪ್ಪ, ಗೌತಮ್, ಕಿರಣ್, ವಿಕ್ರಮ್ ಹಗೂ ತ್ರಿಶೂಲ್ ಮತ್ತಿತರರು ಹಾಜರಿದ್ದರು.

ಡಾ. ಪೂಜಾ ಮಾತನಾಡಿ ಸ್ವಚ್ಛತೆಯನ್ನು ಕಾಪಾಡುವ ನೌಕರರಿಗೆ ಉತ್ತೇಜನ ನೀಡುವ ಸಲುವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಬೆಳಿಗ್ಗೆ 11 ಗಂಟೆಯಿಂದ 2 ಗಂಟೆಯವರೆಗೆ ನಡೆದ ಶಿಬಿರದಲ್ಲಿ 39ಮಂದಿ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.