ಕುಶಾಲನಗರ, ಡಿ. 19: ಕುಶಾಲನಗರದ ಗೌಡ ಸಮಾಜದ ಆಶ್ರಯದಲ್ಲಿ ಹುತ್ತರಿ ಸಂತೋಷ ಕೂಟದ ಅಂಗವಾಗಿ ಸಮುದಾಯ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಸಮಾಜದ ಹಿರಿಯರಾದ ಉದಯನ ಅಪ್ಪಾಜಿ ಉದ್ಘಾಟಿಸಿದರು.ಪ್ರಿ ನರ್ಸರಿ, ಎಲ್‍ಕೆಜಿ, ಯುಕೆಜಿ ಮಕ್ಕಳಿಗೆ ಬಲೂನ್ ಒಡೆಯುವದು, 1 ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಮೆಮೊರಿ, ಸ್ಪರ್ಧೆ, ಜಿಗ್‍ಜಾಗ್ ರನ್ನಿಂಗ್, 100 ಮೀ ಓಟ, ಗುರಿ ಎಸೆತ, 200 ಮೀ ಓಟ, ಬಕೆಟ್‍ಗೆ ಬಾಲ್ ಎಸೆತ, 400 ಮೀ ಓಟ, ವಿಕೆಟ್‍ಗೆ ಬಾಲ್ ಎಸೆತ, ಗೋಣಿಚೀಲ ಓಟ, ಹಾಕಿ ಬಾಲ್ ಹೊಡೆಯುವ ಸ್ಪರ್ಧೆಗಳು ನಡೆದವು. ದಂಪತಿಗಳಿಗೆ ರಿಲೇ, ಪುರುಷರಿಗೆ, ಮಹಿಳೆಯರಿಗೆ ಶಾಟ್‍ಪುಟ್ ಎಸೆತ, ಬಾಳೆ ಹಣ್ಣು ತಿನ್ನುವದು, 40 ವರ್ಷ ಮೇಲ್ಪಟ್ಟವರಿಗೆ ಹಿಂಬದಿ ನಡಿಗೆ ಸೇರಿದಂತೆ ಮಿನಿ ಫುಟ್ಬಾಲ್, ಟಗ್ ಆಫ್ ವಾರ್, ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಜರುಗಿದವು. ತಾ. 23 ರಂದು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಕ್ರೀಡಾಕೂಟದ ಸಂದರ್ಭ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್, ಕ್ರೀಡಾ ಸಮಿತಿ ಸಂಚಾಲಕ ಚೆರಿಯಮನೆ ಹರೀಶ್, ಬೈಮನ ಬೋಜಮ್ಮ, ಗೌಡ ಯುವಕ ಸಂಘ, ಮಹಿಳಾ ಸ್ವಸಹಾಯ ಸಂಘ, ಮಹಿಳಾ ಒಕ್ಕೂಟ, ಸಾಂಸ್ಕøತಿಕ ವೇದಿಕೆ ಪದಾಧಿಕಾರಿಗಳು, ಸದಸ್ಯರು ಇದ್ದರು.