ಮಡಿಕೇರಿ, ಡಿ.20 : ಮಾಲ್ದಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದ್ದ ಕರಿಮೆಣಸು ಹಗರಣ ಸುಖಾಂತ್ಯವಾಗಿದ್ದು, ನಾಪತ್ತೆಯಾಗಿದ್ದ 104 ಚೀಲ ಕರಿಮೆಣಸು ನ್ಯಾಯಾಲಯದ ಆದೇಶದಂತೆ ಸಂಘÀದ ಸುಪರ್ದಿಗೆ ಬಂದಿರುವದಾಗಿ ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘÀದ ಗೋದಾಮಿನಿಂದ ನಾಪತ್ತೆಯಾಗಿದ್ದ 7,354 ಕೆ.ಜಿ.(104) ಕರಿಮೆಣಸನ್ನು ಜಿಲ್ಲಾ ಅಪರಾಧ ಪತ್ತೆದಳ ತನಿಖಾ ಕಾರ್ಯದ ಮೂಲಕ ಪತ್ತೆಹಚ್ಚಿ, ಸಿದ್ದಾಪÀÅರದ ನಮಾಝ್ ಕೋ ಮಳಿಗೆಯಿಂದ ವಶಕ್ಕೆ ಪಡೆದಿತ್ತು. ಇದೇ ತಾ. 12 ರಂದು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಈ ಕರಿಮೆಣಸನ್ನು ಸಂಘದ ವಶಕ್ಕೆ ನೀಡುವ ಮೂಲಕ ಒಟ್ಟು ಪ್ರಕರಣ ಇತ್ಯರ್ಥವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಮಾಲ್ದಾರೆ ಸಂಘದಲ್ಲಿ ಐವರು ಸಿಬ್ಬಂದಿಗಳು ಇದ್ದು, ಇವರಲ್ಲಿ 23 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿ ಯೊಬ್ಬನ ವಂಚನೆಯಿಂದ ಗೋದಾಮಿನಲ್ಲಿದ್ದ ಕರಿಮೆಣಸು ಕಳೆದ ಮಾರ್ಚ್ ತಿಂಗಳಿನಲ್ಲಿ ನಾಪತ್ತೆ ಯಾಗಿತ್ತು. ಬಳಿಕ ಗೋದಾಮಿನಲ್ಲಿದ್ದ ಮಾಲುಗಳ ಪರಿಶೀಲನೆಯ ಬಳಿಕ ಏಪ್ರಿಲ್‍ನಲ್ಲಿ ಸಿದ್ದಾಪುರ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಪ್ರಕರಣವನ್ನು ನಂತರದ ದಿನಗಳಲ್ಲಿ ಡಿಸಿಐಬಿ ಕೈಗೆತ್ತಿಕೊಂಡು ಪ್ರಾಮಾಣಿಕವಾಗಿ ನಡೆಸಿದ ತನಿಖೆÉಯ ಫಲವಾಗಿ ಒಟ್ಟು ಪ್ರಕರಣ ಬಗೆಹರಿದಿದೆ ಎಂದು ಮಾಹಿತಿ ನೀಡಿದರು.

ಸಂಘÀದ ಗೋದಾಮಿನಲ್ಲಿದ್ದ ವರ್ತಕ ಬಷೀರ್ ಹಾಜಿ ಅವರಿಗೆ ಸೇರಿದ 104 ಚೀಲ ಕರಿಮೆಣಸನ್ನು ಸಂಘದ ಸಿಬ್ಬಂದಿ ವಂಚಿಸಿ ಸಿದ್ದಾಪುರದ ನಮಾಜ್ ಕೋ ಮಳಿಗೆಗೆ ಮಾರಾಟ ಮಾಡಿದ್ದ. ಇದನ್ನು ಪತ್ತೆಹಚ್ಚಿದ ಡಿಸಿಐಬಿ ಮಾಲನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಸಂಬಂಧ ವೀರಾಜಪೇಟೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ವಶಪಡಿಸಿಕೊಂಡ ಕರಿಮೆಣಸನ್ನು ಹರಾಜು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಸಂಘ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆದು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಶಪಡಿಸಿ ಕೊಂಡಿದ್ದ ಕರಿಮೆಣಸನ್ನು ಸಂಘಕ್ಕೆ ನೀಡಿರುವದಾಗಿ ನಂದಾ ಸುಬ್ಬಯ್ಯ ಹೇಳಿದರು.

ವರ್ತಕ ಬಷೀರ್ ಹಾಜಿ ಅವರಿಗೆ ಸೇರಿದ ಕರಿಮೆಣಸು ನಾಪತ್ತೆ ಆದ ಪ್ರಕರಣದ ಸಂದರ್ಭ ಅವರಿಗೆ ಸಂಘವು ಅವರ ಮಾಲಿನ ಬಗ್ಗೆ ಖಾತರಿಯನ್ನು ನೀಡಿತ್ತು ಮತ್ತು ಅದಕ್ಕೆ ಅವರೂ ಸ್ಪಂದಿಸಿದ್ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ಎಲ್ಲಾ ಘಟನೆಗಳ ಬಳಿಕ ಪ್ರಸಕ್ತ ಸಾಲಿನಲ್ಲಿಯೂ ಬಷೀರ್ ಹಾಜಿ ಅವರು ಸಂಘದಲ್ಲಿ ಕರಿಮೆಣ ಸನ್ನು ಇಟ್ಟಿರುವದಾಗಿ ತಿಳಿಸಿದರು.

ಮಾಲ್ದಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕರಿಮೆಣಸು ನಾಪತ್ತೆ ಪ್ರಕರಣದಿಂದ ಎದುರಿಸಿದ್ದ ಸಂಕಷ್ಟ ನಿವಾರಣೆಯಾಗುವವರೆಗೆ ತಮಗೆ ನೈತಿಕ ಬೆಂಬಲವನ್ನು ನೀಡಿದವರನ್ನು ಸ್ಮರಿಸಿಕೊಂಡ ಚೇರಂಡ ನಂದಾ ಸುಬ್ಬಯ್ಯ, ಪ್ರಕರಣವನ್ನು ಡಿಸಿಐಬಿಗೆ ಒಪ್ಪಿಸುವ ಮೂಲಕ ಸಂಘಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಸಹಕರಿಸಿದ ಎಡಿಜಿಪಿ ಭಾಸ್ಕರ್ ರಾವ್, ಎಸ್‍ಪಿ ರಾಜೇಂದ್ರ ಪ್ರಸಾದ್, ಸಿದ್ದಾಪುರ ಠಾಣೆ ಎಸ್‍ಐ ಸುಬ್ರಮಣಿ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಸಂಘ ಒಟ್ಟು ಪ್ರಕರಣದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಡೆಸಿ ಕೊಂಡಿದ್ದರು ಕೆಲವು ಹೊಟ್ಟೆಪಾಡಿನ ಸಂಘÀಟನೆಗಳು ಸಂಘಕ್ಕೆ ಪಾಠ ಹೇಳುವದಕ್ಕೆ ಮುಂದಾಗಿರುವದು ವಿಪರ್ಯಾಸವೆಂದು ಸುಬ್ಬಯ್ಯ ಆರೋಪಿಸಿದರು.

ಭದ್ರತೆ ಹೆಚ್ಚಳ: ಸಂಘÀದ ಗೋದಾಮಿನಲ್ಲಿನ ಕರಿಮೆಣಸು ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಇದೀಗ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆದಿರುವ ದಲ್ಲದೆ, ಹೆಚ್ಚಿನ ಭದ್ರತೆಯೊಂದಿಗೆ ಇರುವ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯ ನಡೆದಿರುವದಾಗಿ ಸ್ಪಷ್ಟಪಡಿಸಿದರು.

ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘ 1700 ಸದಸ್ಯರುಗಳನ್ನು ಒಳಗೊಂಡ ಸಂಘವಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತ ತನ್ನ ವ್ಯಾಪ್ತಿಗೆ ಒಳಪಟ್ಟ ಬಡವರ್ಗದ ಮಂದಿ, ಅಲ್ಪಸಂಖ್ಯಾತ, ಹಿಂದುಳಿದವರ್ಗದ ಅಭ್ಯುದಯಕ್ಕಾಗಿ ಶ್ರಮಿಸಿಕೊಂಡು ಬಂದಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸಂಘದ ನಿವ್ವಳ ಲಾಭ ನಿರೀಕ್ಷೆಗಿಂತ ಕಡಿಮೆಯಾಗಿದ್ದು, 14.24 ಲಕ್ಷ ರೂ.ಗಳಷ್ಟಿದೆ ಎಂದು ತಿಳಿಸಿದರು

ಸಂಘÀದ ನಿರ್ದೇಶಕ ಸಿ.ಎ. ಹಂಸ ಮಾತನಾಡಿ, ಸಂಘ ಕರಿಮೆಣಸು ಪ್ರಕರಣದಿಂದ ಹೊರ ಬಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸುದ್ದಿ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಟಿ.ರಾಮಕೃಷ್ಣ, ನಿರ್ದೇಶಕರಾದ ಪ್ರಮೀಳಾ ನಾಚಪ್ಪ, ಸಂಘದ ಮಾಜಿ ಅಧ್ಯಕ್ಷ ಎಂ.ಎಂ. ನಂಜಪ್ಪ, ಸಂಘÀದ ಸದಸ್ಯರು ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಸಜಿ ಥೋಮಸ್ ಉಪಸ್ಥಿತರಿದ್ದರು.