ಕುಶಾಲನಗರ, ಡಿ. 19: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸ್ತಾ ಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ, ನೈವೇದ್ಯ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ ಬೆಳಗಲಾಯಿತು. ಅರ್ಚಕ ಹರಿಭಟ್ ನೇತೃತ್ವದ ಅರ್ಚಕರಾದ ಕೃಷ್ಣಮೂರ್ತಿ ಭಟ್, ವಿಷ್ಣುಮೂರ್ತಿ ಭಟ್, ಸೋಮಶೇಖರ್ ಭಟ್ ತಂಡ ಪೂಜಾ ವಿಧಿಗಳನ್ನು ನೆರವೇರಿಸಿದರು.
ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತಾದಿಗಳು ಪೂಜೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪೂಜೋತ್ಸವದ ಅಂಗವಾಗಿ ಪಾಲ್ ಕೊಂಬು ಮೆರವಣಿಗೆ ಚಂಡೆ, ವಾದ್ಯಗೋಷ್ಠಿಗಳ ಸಹಿತ ಭವ್ಯ ದೀಪಾಲಂಕೃತ ವಾಹನದಲ್ಲಿ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭಾಗವಹಿಸಿದ್ದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಪಿ.ಗಣಪತಿ, ಕಾರ್ಯದರ್ಶಿ ಮಹೇಶ್ ನಾಲ್ವಡೆ, ಖಜಾಂಚಿ ಕೆ.ಆರ್. ಸುಬ್ರಮಣಿ, ನಿರ್ದೇಶಕರಾದ ಟಿ.ಕೆ. ಸುಬ್ಬಯ್ಯ, ಎಸ್.ಕೆ. ಶ್ರೀನಿವಾಸರಾವ್, ಡಿ.ಆರ್. ಸೋಮಶೇಖರ್, ಡಿ.ಕೆ. ತಿಮ್ಮಪ್ಪ, ಇದ್ದರು.