ಶ್ರೀಮಂಗಲ, ಡಿ. 20: ಪೊನ್ನಂಪೇಟೆಯನ್ನು ಕೇಂದ್ರ ಸ್ಥಾನವಾಗಿರಿಸಿ ಈ ಹಿಂದೆ ಕ್‍ಗ್ಗಟ್ಟ್ ನಾಡ್ ತಾಲೂಕು ಆಗಿದ್ದ ಪೊನ್ನಂಪೇಟೆಯನ್ನು ಪುನಹಃ ತಾಲೂಕು ಕೇಂದ್ರವಾಗಿ ಮರುಸ್ಥಾಪನೆ ಮಾಡಬೇಕೆಂದು ಪೊನ್ನಂಪೇಟೆ ತಾಲೂಕು ಪುನರ್ ರಚನಾ ಹೋರಾಟ ಸಮಿತಿ ಆಶ್ರಯದಲ್ಲಿ ಕಳೆದ 50 ದಿನಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದು, ಅಭೂತಪೂರ್ವ ಬೆಂಬಲ ಸಾರ್ವಜನಿಕರಿಂದ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ವ್ಯಕ್ತವಾಗುತ್ತಿದೆ. ತಾಲೂಕು ರಚನೆಯಾಗುವವರೆಗೆ ಎಲ್ಲಾ ರೀತಿಯ ಹೋರಾಟಕ್ಕೂ ಬೆಂಬಲ ನೀಡುವ ಭರವಸೆಯನ್ನು ಎಲ್ಲಾ ಸಂಘ ಸಂಸ್ಥೆಗಳು ವಿವಿಧ ಕುಟುಂಬ ಸದಸ್ಯರು ವ್ಯಕ್ತಪಡಿಸಿದ್ದಾರೆ.

50ನೇ ದಿನದ ಇಂದಿನ ಹೋರಾಟದಲ್ಲಿ ಕೈಕೇರಿಯ ಭಗವತಿ ದೇವಸ್ಥಾನ ಸಮಿತಿ, ಕೈಕೇರಿ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್, ಕೈಕೇರಿ ಯುವಕ ಸಂಘ, ಅರುವತ್ತೋಕ್ಲು ಕಾಡ್ಲಯ್ಯಪ್ಪ ಯೂತ್ ಅಸೋಸಿಯೇಷನ್, ಪೊನ್ನಂಪೇಟೆ ನಿಸರ್ಗ ನಗರದ ಸನ್‍ರೈಸ್ ಫ್ರೆಂಡ್ಸ್, ಪೊನ್ನಂಪೇಟೆ ನಾಗರೀಕ ಹೋರಾಟ ಸಮಿತಿ, ಪೊನ್ನಂಪೇಟೆ ಹಿರಿಯ ನಾಗರಿಕರ ಸಂಘ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಿದವು.

ಈ ಸಂದÀರ್ಭ ಮಾತನಾಡಿದ ಪೊನ್ನಂಪೇಟೆ ತಾಲೂಕು ಪುನರ್ ರಚನಾ ಹೋರಾಟ ಸಮಿತಿಯ ಕಾರ್ಯಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು, ಶಾಂತಿಯುತವಾಗಿ, ನ್ಯಾಯಯುತ ವಾಗಿ 50 ದಿವಸ ಪೂರೈಸಿದ ನಮ್ಮ ಹೋರಾಟದ ಧ್ವನಿ ಸರಕಾರಕ್ಕೆ ಈಗಾಗಲೇ ತಲುಪಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲಿಸುವ ಭರವಸೆ ನೀಡಿರುವದರಿಂದ ಹೋರಾಟ ಫಲಪ್ರಧವಾಗುವದೆಂಬ ನಂಬಿಕೆ ಇದೆ. ಜನವರಿ 9ಕ್ಕೆ ಮುಖ್ಯಮಂತ್ರಿಗಳು ಕೊಡಗಿಗೆ ಬರುವವರೆಗೆ ಇದೇ ರೀತಿಯ ಶಾಂತಿಯುತ ಹೋರಾಟವನ್ನು ಮುಂದುವರಿಸುವ. ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಸಿಗುವ ತೀರ್ಮಾನ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ. ಇದುವರೆಗೆ ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ 170ಕ್ಕೂ ಹೆಚ್ಚು ಸಂಘ ಸಂಸ್ಥೆ, ಕುಟುಂಬ ಸದಸ್ಯರು, ಸಾರ್ವಜನಿಕರು ಹಾಗೂ ಸಹಕರಿಸಿದ ಮಾಧ್ಯಮದವರಿಗೆ ಧನ್ಯವಾದಗಳನ್ನು ಅರ್ಪಿಸಿ, ಇದೇ ರೀತಿಯ ಸಹಕಾರವನ್ನು ತಾಲೂಕು ಸಿಗುವವರೆಗೆ ನೀಡುವಂತೆ ಮನವಿ ಮಾಡಿದರು.

ಕೈಕೇರಿ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್‍ನ ಪ್ರಮುಖ ಜಮ್ಮಡ ಮೋಹನ್ ಮಾತನಾಡಿ, ಸರಕಾರ ಸಣ್ಣ ತಾಲೂಕು ರಚನೆ ಮಾಡುವದು ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಲಿ. ಹಾಗೂ ಸರಕಾರದ ಸೌಲಭ್ಯ ಜನರಿಗೆ ಬೇಗ ಸಿಗುವಂತಾಗಲಿ ಎಂದು. ಆದರೆ ಗುಡ್ಡಗಾಡು ಪ್ರದೇಶವಾಗಿರುವ ಪೊನ್ನಂಪೇಟೆ ಭಾಗವನ್ನು ತಾಲೂಕಾಗಿ ಪರಿಗಣಿಸದೆ ನಿರ್ಲಕ್ಷ್ಯ ತಾಳುತ್ತಿರುವದು ಸರಿಯಲ್ಲ. ಪೊನ್ನಂಪೇಟೆಯನ್ನು ಪುನಹ ತಾಲೂಕು ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭ ಕೈಕೇರಿ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್‍ನ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ, ಕಾಡ್ಲಯ್ಯಪ್ಪ ಯೂತ್ ಅಸೋಸಿಯೇಷನ್‍ನ ಅಧ್ಯಕ್ಷ ಮನೆಯಪಂಡ ದೀನಾ ಅಯ್ಯಣ್ಣ, ಉಪಾಧ್ಯಕ್ಷ ಮುಕ್ಕಾಟಿರ ಸುಬ್ರಮಣಿ, ಕಾರ್ಯದರ್ಶಿ ಕಂದಾ ದೇವಯ್ಯ, ಖಜಾಂಚಿ ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಕೈಕೇರಿ ಯುವಕ ಸಂಘದ ಅಧ್ಯಕ್ಷ ಕುಪ್ಪಂಡ ಮುತ್ತಣ್ಣ, ಕಾರ್ಯದರ್ಶಿ ಜಮ್ಮಡ ಲವ ಭೀಮಯ್ಯ, ಪೊನ್ನಂಪೇಟೆ ನಿಸರ್ಗ ನಗರದ ಸನ್‍ರೈಸ್ ಯುವಕ ಸಂಘದ ಅಧ್ಯಕ್ಷ ಎಂ.ಸಿ. ವಿಜು, ಕಾರ್ಯದರ್ಶಿ ಸಂತೋಷ್, ನಿವೃತ್ತ ಶಿಕ್ಷಕ ಸಣ್ಣುವಂಡ ದೇವಯ್ಯ, ಕಾಳಿಮಾಡ ಎಂ. ಮೋಟಯ್ಯ, ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಸಂಚಾಲ ಮಾಚಿಮಾಡ ರವೀಂದ್ರ, ನಾಗರಿಕ ಹೋರಾಟ ಸಮಿತಿಯ ಮತ್ರಂಡ ಅಪ್ಪಚ್ಚು, ಮೂಕಳೇರ ಕುಶಾಲಪ್ಪ, ಚೆಪ್ಪುಡಿರ ಸೋಮಯ್ಯ, ಚೇಂದೀರ ಅಪ್ಪಯ್ಯ, ಕೊದೇಂಗಡ ವಿಠಲ, ಚೆಟ್ರುಮಾಡ ಶಂಕರು, ಐನಂಡ ಬೋಪಣ್ಣ, ಚೋಡುಮಾಡ ಶ್ಯಾಂ ಪೂಣಚ್ಚ, ಎರ್ಮು ಹಾಜಿ, ಮೂಕಳೇರ ಲಕ್ಷ್ಮಣ, ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ಸುರೇಶ್, ಅನೀಶ್, ನಿವೃತ್ತ ಶಿಕ್ಷಕ ಪಾರುವಂಗಡ ಸನ್ನಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ಈ ಸಂದರ್ಭ ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಮಹಾತ್ಮಗಾಂಧಿ ಪ್ರತಿಮೆಯವರೆಗೆ ಜಾಥ ನಡೆಸಿ 15 ನಿಮಿಷಗಳ ಕಾಲ ರಸ್ತೆ ತಡೆ ಹಾಗೂ ಮಾನವ ಸರಪಳಿ ಮಾಡಿ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.