ಮಡಿಕೇರಿ, ಡಿ. 16: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರಿಕೆಯಲ್ಲಿ ತಾ. 30 ರಂದು ನಡೆಯಲಿರುವ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕವಿಗೋಷ್ಠಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಮಡಿಕೇರಿ ತಾಲೂಕಿನ ಕವಿ - ಕವಯತ್ರಿಯರು 20 ಸಾಲುಗಳಿಗೆ ಮೀರದಂತೆ ಸ್ವರಚಿತ ಕವನಗಳನ್ನು ಕಳುಹಿಸಿ ಕೊಡಬೇಕಿದೆ. ಉದಯೋನ್ಮುಖ ಕವಿಗಳಿಗೆ ಅದ್ಯತೆ ನೀಡಲಾಗುತ್ತಿದ್ದು, ಈ ಹಿಂದೆ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದವರಿಗೆ ಅವಕಾಶವಿರುವದಿಲ್ಲ. ಆಸಕ್ತ ಕವಿಗಳು ತಾ. 22ರ ಒಳಗಾಗಿ ಅಧ್ಯಕ್ಷರು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೋಟೆ ಅವರಣ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಿ ಕೊಡಬಹುದಾಗಿದೆ.

ಸಾಂಸ್ಕøತಿಕ ಕಾರ್ಯಕ್ರಮ

ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮ ನೀಡಲಿಚ್ಛಿಸುವ ಮಡಿಕೇರಿ ತಾಲೂಕು ವ್ಯಾಪ್ತಿಯ ಕಲಾ ತಂಡಗಳು ತಾ.22ರ ಒಳಗಾಗಿ ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾದ ನಿಂಗಪ್ಪ ಮಾಸ್ಟರ್ (9483394701), ಸಂಚಾಲಕಿ ಯಶೋದ ಟೀಚರ್ (9480551136) ಇವರುಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ (8762110948) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.