ಸಿದ್ದಾಪುರ, ಡಿ. 13: ಹುಂಡಿಯ ಫ್ರೀಡಂ ಬಾಯ್ಸ್ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಪೊನ್ನಂಪೇಟೆಯ ಸ್ಲೀಪರ್ಸ್ ತಂಡವು ಜಯಗಳಿಸಿ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಬಾಡಗ-ಬಾಣಾಂಗಾಲ ಗ್ರಾಮದ ಸಿಗ್ನೇಚರ್ಸ್ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಹುಂಡಿ ಗ್ರಾಮದ ಮೈದಾನದಲ್ಲಿ ನಡೆದ ವಾಲಿಬಾಲ್ ಅಂತಿಮ ಪಂದ್ಯಾಟದಲ್ಲಿ ಪೊನ್ನಂಪೇಟೆ ಸ್ಲೀಪರ್ಸ್ ತಂಡ ಹಾಗೂ ಬಾಡಗ-ಬಾಣಂಗಾಲದ ಸಿಗ್ನೇಚರ್ಸ್ ತಂಡಗಳ ನಡುವೆ ರೋಮಾಂಚಕಾರಿ ಆಟ ಕುತೂಹಲಕಾರಿಯಾಗಿತ್ತು. ಎರಡು ತಂಡಗಳ ನಡುವೆ ಹಣಾಹಣಿಯಲ್ಲಿ ಪೊನ್ನಂಪೇಟೆ ಸ್ಲೀಪರ್ ತಂಡವು ವಿಜಯಶಾಲಿಯಾಯಿತು. ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿಯನ್ನು ಅತಿಥಿಗಳು ವಿತರಿಸಿದರು. ಪಂದ್ಯಾವಳಿ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್‍ನ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ, ಮಾಲ್ದಾರೆ ಅಲ್ಪಸಂಖ್ಯಾತ ಘಟಕದ ವಲಯ ಅಧ್ಯಕ್ಷ ಸಿ.ಎ. ಹಂಸ, ಜಿ.ಪಂ. ಮಾಜಿ ಸದಸ್ಯ ಸಣ್ಣಯ್ಯ, ಮುಖ್ಯಪೇದೆ ಲೋಕೇಶ್, ಯುವ ಕಾಂಗ್ರೆಸ್ ಮುಖಂಡ ಜಮ್ಮಡ ಸೋಮಣ್ಣ, ಪ್ರೀಡಂ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ನಿಯಾಸ್ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಇದೇ ಸಂದರ್ಭ ಉತ್ತಮ ಆಟಗಾರರಾದ ಚಿಣ್ಣು, ರಶೀದ್, ಅರುಣ್, ಅಶ್ರಫ್ ಅವರಿಗೆ ಪ್ರಶಸ್ತಿ ನೀಡಲಾಯಿತು.