*ಸಿದ್ದಾಪುರ, ಡಿ.12: ಕಳೆದ ಒಂದು ವರ್ಷದಿಂದ ರಸ್ತೆ ಬದಿಯಲ್ಲೇ ಕಾರೊಂದು ನಿಂತಿದ್ದು, ಸ್ಥಳೀಯರಲ್ಲಿ ಅನುಮಾನ ಹುಟ್ಟಿಕೊಂಡಿದೆ.

ಸಿದ್ದಾಪುರ ಸಮೀಪದ ಕಾನನ್‍ಕಾಡು ಮಡಿಕೇರಿ ಮುಖ್ಯ ರಸ್ತೆ ಬದಿಯಲ್ಲಿ ಕಾರೊಂದು (ಕೆಎಲ್ 7 ವೈ 1073) ಕಳೆದ ಒಂದು ವರ್ಷದಿಂದ ರಸ್ತೆ ಬದಿಯಲ್ಲೇ ಕಾಣಿಸಿಕೊಂಡಿದ್ದು, ಇದುವರೆಗೂ ಕಾರಿನ ವಾರಸುದಾರರು ಇತ್ತ ಕಡೆ ತಿರುಗಿ ನೋಡಲೇ ಇಲ್ಲ. ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವದರಿಂದ ಕೂಡಲೇ ಪೊಲೀಸರು ಮುಟ್ಟುಗೋಲು ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.