ಶ್ರೀಮಂಗಲ, ಡಿ. 12 : ಕೊಡವ ಜಾನಪದ ಕಲೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಬೆಳೆಸಿ ಪೋಷಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ, ಕಳೆದ 20 ವರ್ಷದಿಂದ ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಕೊಡವ ಸಾಂಸ್ಕøತಿಕ ದಿನ ಆಚರಣೆಯನ್ನು ತಾ. 17ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ತಿಳಿಸಿದರು. ಸಮಾಜದ ಕಚೇರಿಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.

ಕಳೆದ 20 ವರ್ಷದಿಂದ ಪೊನ್ನಂಪೇಟೆ ಕೊಡವ ಸಮಾಜ ಕೊಡವ ಸಾಂಸ್ಕøತಿಕ ದಿನ ಆಚರಿಸುತ್ತಿದ್ದು, ಅದೇ ದಿನ ಪುತ್ತರಿ ಊರೋರ್ಮೆಯನ್ನು ಸಹ ನಡೆಸುತ್ತಿದ್ದು, ಈ ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ಸಮಾಜದ ಸಾಂಸ್ಕøತಿಕ ಸಮಿತಿಯ ಸಂಚಾಲಕರಾದ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಮತ್ತು ಸಮಿತಿಯ ಅಧ್ಯಕ್ಷೆ ಚೆಪ್ಪುಡಿರ ರೂಪ ಉತ್ತಪ್ಪ ಅವರಿಗೆ ನೀಡಲಾಗಿದೆ ಎಂದು ರಾಜೀವ್ ಬೋಪಯ್ಯ ತಿಳಿಸಿದರು.

ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ, ಕೊಡವ ಸಾಂಸ್ಕøತಿಕ ದಿನದಂದು ವಿವಿಧ ಕೊಡವ ಜಾನಪದ ಪೈಪೋಟಿಯನ್ನು ನಡೆಸಲಾಗುವದು. ತಾ. 17ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 1 ಗಂಟೆಯವರೆಗೆ ಕೋಲಾಟ್, ಬೊಳಕಾಟ್, ಕಪ್ಪೆಯಾಟ್, ಪರೆಯಕಳಿ, ಉಮ್ಮತ್ತಾಟ್, ವಾಲಗತ್ತಾಟ್ ಪೈಪೋಟಿಯನ್ನು ಚಿಕ್ಕವರು ಮತ್ತು ದೊಡ್ಡವರು ಎಂಬ ಎರಡು ವಿಭಾಗದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದಲ್ಲದೆ ಪೊನ್ನಂಪೇಟೆ ಕೊಡವ ಸಮಾಜದ ತಂಡದಿಂದ ಪ್ರತ್ಯೇಕವಾದ ಕೋಲಾಟ್ ಮತ್ತು ಉಮ್ಮತ್ತಾಟ್ ಪ್ರದರ್ಶನ ನಡೆಯಲಿದೆ. ಮಹಿಳೆಯರಿಗಾಗಿ ಸಂಗೀತ ಕುರ್ಚಿ ಕಾರ್ಯಕ್ರಮ ಇದೆ ಎಂದು ಮಾಹಿತಿ ನೀಡಿದರು.

ಅಪರಾಹ್ನ 2 ರಿಂದ 2.30 ರವರೆಗೆ ಕೊಡವ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಬೆಕ್ಕೆಸೊಡ್ಲೂರು ಮಂದತವ್ವ ತಂಡದಿಂದ ಗೆಜ್ಜೆತಂಡ್ ನೃತ್ಯ ಮತ್ತು ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆ ತಂಡದಿಂದ ನೃತ್ಯರೂಪಕ ನಡೆಯಲಿದೆ ಎಂದು ಮೋಟಯ್ಯ ತಿಳಿಸಿದರು.

ಅಪರಾಹ್ನ 2.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಸೂಪರಿಟೆಂಡೆಂಟ್ ಮುಕ್ಕಾಟಿರ ಚೋಟು ಅಪ್ಪಯ್ಯ ಹಾಗೂ ಸಾಹಿತಿ-ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಾಂಪ್ರದಾಯಿಕವಾದ ಪುತ್ತರಿ ‘ಮಂದ್ ಮರೆಯುವೊ’ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಪಿ. ಬೋಪಣ್ಣ, ಗೌರವ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಜಂಟಿಕಾರ್ಯದರ್ಶಿ ಅಪ್ಪಂಡೇರಂಡ ಆರ್. ಶಾರದಾ, ಖಜಾಂಚಿ ಮೂಕಳೇರ ಪಿ. ಲಕ್ಷ್ಮಣ, ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಚೆಪ್ಪುಡಿರ ರೂಪ ಉತ್ತಪ್ಪ ಹಾಜರಿದ್ದರು.