ಮೂರ್ನಾಡು, ಡಿ. 11: ಮೂರ್ನಾಡು ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾದ ವೀಕ್ಷಕ ಗ್ಯಾಲರಿ ಮತ್ತು ನೂತನವಾಗಿ ನಾಮಾಂಕಿತಗೊಂಡ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದ ಉದ್ಘಾಟನೆ ಕಾರ್ಯಕ್ರಮ ಜರುಗಿತು.ವೀಕ್ಷಕ ಗ್ಯಾಲರಿ ನಿರ್ಮಿಸಿದ ದಾನಿಗಳಾದ ಬಾಚೆಟ್ಟಿರ ಲಾಲು ಮುದ್ದಯ್ಯ ಮತ್ತು ಕಮಲು ಮುದ್ದಯ್ಯ ಉದ್ಘಾಟನೆ ನೆರವೇರಿಸಿ ದರು. ಕ್ರೀಡಾಂಗಣದಲ್ಲಿ ನಡೆಸ ಲಾಗುವ ಕ್ರೀಡೆಗಳನ್ನು ನೆರಳಿನಲ್ಲಿ ಕುಳಿತು ವೀಕ್ಷಿಸಲು ವೀಕ್ಷಕ ಗ್ಯಾಲರಿ ಮತ್ತು ಮೈದಾನಕ್ಕೆ ಎರಡು ಕ್ರೀಡಾ ಭವನಗಳ ನಿರ್ಮಾಣಕ್ಕೆ ಸುಮಾರು 80ಲಕ್ಷ ರೂ.ಗಳನ್ನು ಉದಾರವಾಗಿ ನೀಡುವದರೊಂದಿಗೆ ಕ್ರೀಡೆಗಳಿಗೆ ಪÉÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಕೊಡುಗೆ ನೀಡಿದ ದಾನಿಗಳಾದ ನಿವೃತ್ತ ಮುಖ್ಯ ಶಿಕ್ಷಕ ಬಾಚೆಟ್ಟಿರ ಲಾಲು ಮುದ್ದಯ್ಯ ಮತ್ತು ಅವರ ಪತ್ನಿ ಕಮಲು ಮುದ್ದಯ್ಯ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಲ್ಲದೆ, ಜಿಲ್ಲೆಯ ವಿವಿಧ ಭಾಗಗಳಿಂದ ಹಾಕಿ, ಕ್ರಿಕೆಟ್, ಪುಟ್ಬಾಲ್ ಹಾಗೂ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಕ್ರೀಡಾ ಮೈದಾನವನ್ನು ನೀಡಿ ಪÉÇ್ರೀತ್ಸಾಹ ನೀಡುತ್ತಿದೆ. ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ, ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಖಜಾಂಚಿ ಪುದಿಯೊಕ್ಕಡ ಸುಬ್ರಮಣಿ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಬಡುವಂಡ ಸುಬ್ರಮಣಿ, ಈರಮಂಡ ಸೋಮಣ್ಣ, ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಭಾಗೀರತಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ ಹಾಗೂ ಉಪನ್ಯಾಸಕ ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು.