ಕರಿಕೆ, ಡಿ. 11 : ಇಲ್ಲಿಗೆ ಸಮೀಪದ ಚೆತ್ತುಕಾಯದ ಪಚ್ಚೆಪಿಲಾವು ಮೂಸ ಅವರಿಗೆ ಸೇರಿದ ಕರುವೊಂದನ್ನು ಚಿರತೆ ತಿಂದು ಹಾಕಿದ್ದು ಮತ್ತೊಂದು ಕರುವನ್ನು ಗಂಭೀರವಾಗಿ ಗಾಯಗೊಳಿಸಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಮೀಪದಲ್ಲೆ ಅಂಗನವಾಡಿ ಕೇಂದ್ರವೊಂದು ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳು ಹಾಗೂ ಪೋಷಕರು ಭಯಬೀತರಾಗಿದ್ದಾರೆ. ಚಿರತೆಯ ಚಲನವಲನವನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ 6 ತಿಂಗಳಿನನಿಂದ ಸುಮಾರು ಇಪ್ಪತ್ತು ಕಡೆ ಚಿರತೆ ಧಾಳಿ ನಡೆಸಿದ್ದರೂ ಕೂಡ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.