ಸೋಮವಾರಪೇಟೆ, ಡಿ. 10: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳ ಸಂತೆ ನಡೆಯಿತು.

ಗ್ರಾಮೀಣ ಹಾಗೂ ಪಟ್ಟಣದ ವಿದ್ಯಾರ್ಥಿಗಳು ವಿವಿಧ ತರಕಾರಿ, ಸೊಪ್ಪು, ವಿವಿಧ ರೀತಿಯ ಹುಳಿಯ ಹಣ್ಣುಗಳನ್ನು ತಂದು ಮಾರಾಟ ಮಾಡಿದರು. ಕಾರ್ಯಕ್ರಮಕ್ಕೆ ಬಂದ ಪೋಷಕರು ಹಾಗೂ ಶಿಕ್ಷಕರು ತರಕಾರಿಗಳನ್ನು ಖರೀದಿಸಿ ವಿದ್ಯಾರ್ಥಿ ಗಳನ್ನು ಪ್ರೋತ್ಸಾಹಿಸಿದರು.

ಮನೆಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗಳ ಉಪಯೋಗದ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದರು. ಗ್ರಾಹಕ ವೇದಿಕೆಯ ಉಪಯೋಗದ ಬಗ್ಗೆ ಉಪನ್ಯಾಸಕಿ ತಿಲೋತ್ತಮೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಹಂತದಲ್ಲಿ ಆರೋಗ್ಯ ಮುಖ್ಯವಾದುದು. ಸೊಪ್ಪು, ತರಕಾರಿಯನ್ನು ಹೆಚ್ಚಿಗೆ ಸೇವಿಸುವದ ರಿಂದ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ತಂಗಮ್ಮ, ಕಾಲೇಜಿನ ಪ್ರಾಂಶು ಪಾಲ ಚಂದ್ರಶೇಖರ್, ಎಸ್‍ಡಿಎಂಸಿ ಅಧ್ಯಕ್ಷ ಶೇಖರ, ಉಪಾಧ್ಯಕ್ಷೆ ಶಶಿಕಲಾ, ಉಪ ಪ್ರಾಂಶುಪಾಲ ಹೆಚ್.ಬಿ. ತಳವಾರ ಇದ್ದರು. ಶಿಕ್ಷಕಿ ಮಮತ ಕಾರ್ಯಕ್ರಮ ನಿರ್ವಹಿಸಿದರು.