ಮಡಿಕೇರಿ, ಡಿ. 10: ಮಡಿಕೇರಿಯ ಯುವಕನೋರ್ವ ಮಿಸ್ಟರ್ ದಕ್ಷಿಣ ಕನ್ನಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ದಕ್ಷಿಣ ಕನ್ನಡ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿ ಯೇಷನ್ ವತಿಯಿಂದ ಇತ್ತೀಚೆಗೆ ಮಂಗಳೂರಿ ನಲ್ಲಿ ನಡೆದ ದೇಹ ದಾಢ್ರ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಗಣೇಶ್ ಎತ್ತರದ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.

ಮಡಿಕೇರಿಯ ಹೊಟೇಲ್ ಸುರಬಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಯುವಕ ಗಣೇಶ್ ಈ ಸಾಧನೆ ಮಾಡಿದ್ದಾನೆ. ಈತ ಮಡಿಕೇರಿ ಹೊಸ ಬಡಾವಣೆಯ ಕೂರ್ಗ್ ಹೆಲ್ತ್ ಫಿಟ್‍ನೆಸ್ ಕ್ಲಬ್‍ನ ಮಾಲೀಕ ಹಾಗೂ ತರಬೇತುದಾರರಾಗಿರುವ ಚೆಪ್ಪುಡಿರ ಪ್ರದೀಪ್ ಪೂವಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.