ವೀರಾಜಪೇಟೆ, ಡಿ. 10: ವೀರಾಜಪೇಟೆ ಅರಸುನಗರದ ಕೆ.ಜಿ. ಶಾಜಿ ಎಂಬವರಿಗೆ ಸೇರಿದ ಮನೆಯ ಹಿಂಬದಿಯ ಹಿತ್ತಲಲ್ಲಿ 34 ಕೆ.ಜಿ ತೂಕದ ಸಿಹಿ ಕುಂಬಳಕಾಯಿ ಬೆಳೆದಿದ್ದು ಅಪರೂಪವೆನಿಸಿದೆ.ಕುಂಬಳಕಾಯಿಯ ಎತ್ತರ 27 ಇಂಚು, ಅದರ ಸುತ್ತಳತೆ 49 ಇಂಚು ಇದ್ದು ಇದನ್ನು ಎತ್ತಲು ಇಬ್ಬರ ಶ್ರಮ ಅಗತ್ಯ. ಮನೆಯ ಮೇಲಿನ ಸಿಮೆಂಟ್ ಶೀಟ್‍ನಲ್ಲಿ ಕುಂಬಳಕಾಯಿ ಇನ್ನು ಬೆಳವಣಿಗೆಯನ್ನು ಕಾಣುತ್ತಿದ್ದು ಶೀಟ್ ಒಡೆದು ಕುಂಬಳಕಾಯಿ ಕೆಳಗೆ ಬೀಳ ಬಹುದೆನ್ನುವ ಸಂಶಯದಿಂದ ಶಾಜಿ ಅವರು ಇದನ್ನು ಕತ್ತರಿಸಿ ತೆಗೆದು ಭಾರೀ ಗಾತ್ರದ ಕುಂಬಳಕಾಯಿಯನ್ನು‘ಶಕ್ತಿ’ ಪ್ರತಿನಿಧಿಗೆ ತೋರಿಸಿದರು. ಮನೆಯ ಮಾಲೀಕ ಶಾಜಿ ಪ್ರಕಾರ ಇದೇ ರೀತಿಯಲ್ಲಿ ಇನ್ನೊಂದು ಕುಂಬಳಕಾಯಿ ಬೆಳವಣಿಗೆಯನ್ನು ಕಾಣುತ್ತಿದ್ದು ಈಗಿನ ಭಾರೀ ಗಾತ್ರದ ಕುಂಬಳಕಾಯಿ ಸುಮಾರು 90 ದಿನಗಳ ವಯಸ್ಸಾಗಿದೆ.
ಈ ಭಾರೀ ಗಾತ್ರದ ಕುಂಬಳಕಾಯಿಯನ್ನು 2018 ರಂದು ಜನವರಿ 1 ರಂದು ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದಲ್ಲಿ ನಡೆಯುವ ಅಯ್ಯಪ್ಪ ಉತ್ಸವದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಕೊಡುವದಾಗಿ ಶಾಜಿ ‘ಶಕ್ತಿ’ಗೆ ತಿಳಿಸಿದರು.