ವೀರಾಜಪೇಟೆ, ಡಿ. 9: ಇಲ್ಲಿನ ನೆಹರೂ ನಗರದ ನವಜ್ಯೋತಿ ಯುವಕ ಸಂಘದ ವತಿಯಿಂದ ಇಂದು ತಾಲೂಕು ಮೈದಾನದಲ್ಲಿ ಆಯೋಜಿಸಿದ್ದ 2ನೇ ವರ್ಷದ ಜಿಲ್ಲಾಮಟ್ಟದ ಕಾಲ್ಚೆಂಡು ಪಂದ್ಯಾಟವನ್ನು ಉದ್ಘಾಟಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೀವನ್ ಮಾತನಾಡಿದರು.
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ಈ ಪಂದ್ಯಾಟ ಸಹಕಾರಿಯಾಗುತ್ತದೆ ಎಂದರು.
ಜೆಡಿಎಸ್ ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯೆ ಬಿ.ಡಿ. ಸುನೀತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಚನ್ ಮೇದಪ್ಪ, ಸಚಿನ್ ಕುಟ್ಟಯ್ಯ, ಕೆ.ವಿ. ಸಂತೋಷ್, ನಾಮಕರಣ ಸದಸ್ಯ ಮಹ್ಮಮದ್ ರಾಫಿ, ಜೋಕಿಂ ರಾಡ್ರಿಗಾಸ್, ಸಿಬಿ ಕುರಿಯನ್ ಉಪಸ್ಥಿತರಿದ್ದರು. ಝೂಡಿ ವಾಝ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.