2,749 ಮಂದಿಗೆ ಚಿಕಿತ್ಸೆ

ಮಡಿಕೇರಿ, ಡಿ. 8: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾರಕ ರೋಗ ಏಡ್ಸ್‍ಗೆ ಕಾರಣವಾಗುವ ಹೆಚ್‍ಐವಿ ಸೋಂಕಿನ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 2002ರಿಂದ ಪ್ರಸಕ್ತ ಸಾಲಿನ ಅಕ್ಟೋಬರ್‍ವರೆಗೆ ಒಟ್ಟು 2,60,205 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 2,749 ಸೋಂಕಿತರನ್ನು ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗಿದೆಯೆಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಡ್ಸ್ ನಿಯಂತ್ರಣ ಕಾರ್ಯಕ್ರಮ ಆರಂಭವಾದ 2002ರಲ್ಲಿ ಜಿಲ್ಲೆಯಲ್ಲಿ ತಪಾಸಣೆÉಗೆ ಒಳಗಾದವರಲ್ಲಿ ಪತ್ತೆಯಾದ ಸೋಂಕಿತರ ಪ್ರಮಾಣ ಶೇ. 12.6 ರಷ್ಟಿತ್ತು. ಅದರ ಪ್ರಮಾಣ 2017ಕ್ಕೆ ಶೇ. 0.6ಕ್ಕೆ ಇಳಿದಿದೆಯೆಂದು ಮಾಹಿತಿ ನೀಡಿದರು. ಇಲ್ಲಿಯವರೆಗೆ ಒಟ್ಟು ಹೆಚ್‍ಐವಿ ಸೋಂಕಿಗೆ ಒಳಗಾದವರಲ್ಲಿ 434 ಮಂದಿ ಸಾವನ್ನಪ್ಪಿದ್ದು, ಪ್ರಸಕ್ತ ಸಾಲಿನಲ್ಲಿ ಈ ಹಿಂದೆಯೇ ಸೋಂಕಿಗೆ ಒಳಗಾಗಿದ್ದ 15 ಮಂದಿ ಕೊನೆಯುಸಿರೆಳೆದಿರುವದಾಗಿ ತಿಳಿಸಿದರು.

ಹೆಚ್‍ಐವಿ ಸೋಂಕಿತರ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಕೊಡಗಿನಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 41 ಐಸಿಟಿಸಿ ಕೇಂದ್ರ್ರ, ಜಿಲ್ಲಾ ಆಸ್ಪತ್ರೆಯ 1 ಎಆರ್‍ಟಿ ಕೇಂದ್ರ, ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರಗಳಲ್ಲಿನ 3 ಲಿಂಕ್ ಎಆರ್‍ಟಿ ಕೇಂದ್ರ ಮತ್ತು 10 ಇಐಡಿ ಕೇಂದ್ರಗಳ ಮೂಲಕ ಹೆಚ್‍ಐವಿ ಸೋಂಕಿತರ ಪರೀಕ್ಷೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಆಶೋದಯ ಮತ್ತು ಸ್ನೇಹಾಶ್ರಯ, ಸರ್ವೋದಯ ಸ್ವಯಂಸೇವಾ ಸಂಸ್ಥೆಗಳು ಅಗತ್ಯ ಸಹಕಾರವನ್ನು ನೀಡುತ್ತಿರುವದಾಗಿ ಡಾ. ಶಿವಕುಮಾರ್ ಮಾಹಿತಿ ನೀಡಿದರು.

ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ- ಹೆಚ್‍ಐವಿ ಮತ್ತು ಏಡ್ಸ್ ಕುರಿತ ವ್ಯಾಪಕ ಅರಿವು ಕಾರ್ಯಕ್ರಮ, ಅಗತ್ಯ ತಪಾಸಣೆ, ಚಿಕಿತ್ಸೆಗಳ ಹಿನ್ನೆಲೆ ಹೆಚ್‍ಐವಿ ಸೋಂಕಿತರ ಸಂಖ್ಯೆ ಅಪೇಕ್ಷಣೀಯ ಮಟ್ಟದಲ್ಲಿ ಇಳಿಯುತ್ತಿದೆ. 2010 ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 275 ಹೆಚ್‍ಐವಿ ಸೋಂಕಿತರಿದ್ದರೆ, 2011ರಲ್ಲಿ 220, 2012 ರಲ್ಲಿ 178, 2013 ರಲ್ಲಿ 158, 2014 ರಲ್ಲಿ 161, 2015ರಲ್ಲಿ 171, 2016ರಲ್ಲಿ 148 ಮತ್ತು ಪ್ರಸಕ್ತ 2017 ರಲ್ಲಿ 101 ಹೆಚ್‍ಐವಿ ಸೋಂಕಿತರಿರುವದಾಗಿ ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿರುವ 10 ಇಐಡಿ ಪರೀಕ್ಷಾ ಕೇಂದ್ರಗಳ ಮೂಲಕ 2011ರಿಂದ ಹೆಚ್‍ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಮಕ್ಕಳಲ್ಲಿ 6 ವಾರಗಳಿಂದ 18 ತಿಂಗಳ ಒಳಗಿನ 95 ಮಕ್ಕಳಿಗೆ ಡಿಎನ್‍ಎ ಮತ್ತು ಪಿಸಿಆರ್ ಪರೀಕ್ಷೆ ನಡೆಸಿದ್ದು, ಅವರಲ್ಲಿ 5 ಮಕ್ಕಳಿಗೆ ಹೆಚ್‍ಐವಿ ಸೋಂಕು ತಗಲಿರುವದು ಕಂಡು ಬಂದಿರುವದಾಗಿ ಹೇಳಿದರು. ತಾ. 1 ರಂದು ನಡೆಸಬೇಕಾಗಿದ್ದ ಏಡ್ಸ್ ದಿನವನ್ನು ತಾ. 13 ರಂದು ಮಡಿಕೆÉೀರಿಯಲ್ಲಿ ಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಕಾವೇರಿ ಕಲಾ ಕ್ಷೇತ್ರದವರೆಗೆ ಅರಿವು ಜಾಥಾ ನಡೆಯಲಿದೆ. ಈ ಬಾರಿ ‘ನನ್ನ ಆರೋಗ್ಯ ನನ್ನ ಹಕ್ಕು’ ಎನ್ನುವ ಘೋಷಣೆ ಹಾಗೂ ‘ಆರೋಗ್ಯ ಎಲ್ಲರ ಹಕ್ಕು’ ಎನ್ನುವ ಧ್ಯೇಯ ವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನಾZರಣೆ ನಡೆಯಲಿದ್ದು, ಜಾಥಾ ಬಳಿಕ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿರುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಸುನೀತ, ಆರೈಕೆ ಮತ್ತು ಬೆಂಬಲ ಕೇಂದ್ರದ ಜಿಲ್ಲಾ ಸಂಯೋಜಕಿ ಸುಮೀನ, ಆಪ್ತ ಸಮಾಲೋಚಕ ಚಂಗಪ್ಪ ಹಾಗೂ ಆಶೋದಯ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ವನಿತಾ ಉಪಸ್ಥಿತರಿದ್ದರು.