ಕುಶಾಲನಗರ, ಡಿ. 7: ಕುಶಾಲನಗರದ ಸಹೃದಯ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿಗೆ ಭಾಜನರಾದ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸದಾಶಿವಯ್ಯ ಎಸ್. ಪಲ್ಲೇದ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು ಸ್ಥಳೀಯ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸದಾಶಿವಯ್ಯ ಪಲ್ಲೇದ್ ದಂಪತಿಗಳನ್ನು ಬಳಗದ ಸದಸ್ಯರು ಸನ್ಮಾನಿಸಿದರು. ಈ ಸಂದರ್ಭ ಬಿಸಿಎಂ ಅಧಿಕಾರಿ ಕೆ.ವಿ. ಸುರೇಶ್, ಡಯಟ್ ಉಪನ್ಯಾಸಕ ಮಲ್ಲೇಸ್ವಾಮಿ, ಸಾಹಿತಿ ಭಾರಧ್ವಾಜ್, ಶಿಕ್ಷಕರಾದ ಉ.ರಾ. ನಾಗೇಶ್, ಟಿ.ಜಿ. ಪ್ರೇಮ್ ಕುಮಾರ್, ಜಂಶಿದ್ ಅಹಮ್ಮದ್ ಖಾನ್, ವಕೀಲ ನಂದಕುಮಾರ್, ಡಾ. ರವಿಚಂದ್ರ, ಲೋಕೇಶ್ ಸಾಗರ್, ಪಿ. ಮಹದೇವಪ್ಪ, ಎನ್.ಕೆ. ಮೋಹನ್ ಕುಮಾರ್ ಮತ್ತಿತರರು ಇದ್ದರು.