ಮಡಿಕೇರಿ, ಡಿ. 8 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಬಗ್ಗೆ ಹೆಚ್ಚಿನ ಕಾಳಜಿ ತೋರುವ ಮೂಲಕ ವಿಶೇಷ ಪ್ಯಾಕೇಜ್‍ನಡಿ ಅನುದಾನ ಬಿಡುಗಡೆ ಮಾಡಿರುವದರಿಂದ ಜಿಲ್ಲೆಯ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಯಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.

ಮೇಕೇರಿ ಗ್ರಾ.ಪಂ. ಮತ್ತು ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನ ಅನುದಾನ ಸದುಪಯೋಗವಾಗುತ್ತಿದ್ದು, ಮೇಕೇರಿ ಗ್ರಾ.ಪಂ. ಮತ್ತು ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳನ್ನು ಕೂಡ ಇದೇ ಅನುದಾನದಡಿ ಅಭಿವೃದ್ಧಿಪಡಿಸ ಲಾಗುತ್ತಿದೆ ಎಂದರು.

ರಾಜ್ಯ ಸರಕಾರ ನೀಡಿದ ವಿಶೇಷ ಪ್ಯಾಕೇಜ್ ಕೊಡಗು ಜಿಲ್ಲೆಗೆ ವರದಾನವಾಗಿದ್ದು, ರಸ್ತೆಗಳು ಅಭಿವೃದ್ಧಿಯಾಗಬೇಕೆನ್ನುವ ಗ್ರಾಮೀಣ ಜನರ ಬೇಡಿಕೆ ಈಡೇರಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

2017-18ನೇ ಸಾಲಿಗೂ ವಿಶೇಷ ಪ್ಯಾಕೇಜ್‍ನಡಿ ರೂ. 50 ಕೋಟಿ ಬಿಡುಗಡೆಯಾಗಿದ್ದು, ರಾಜ್ಯ ಸರಕಾರದಿಂದ ಮತ್ತಷ್ಟು ಅನುದಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುವದಾಗಿ ಅವರು ಭರವಸೆ ನೀಡಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ ಮಾತನಾಡಿ, ಪ್ರತಿ ವರ್ಷ 50 ಕೋಟಿ ರೂ. ವಿಶೇಷ ಪ್ಯಾಕೇಜ್ ಅನುದಾನದ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. 105 ಗ್ರಾ.ಪಂ. ಗಳಿಗೆ 50 ರಿಂದ 75 ಲಕ್ಷದಷ್ಟು ಹಣ ಹಂಚಿಕೆ ಮಾಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸ ಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮೇಕೇರಿ ಮಲಯ ಕಾಂಗ್ರೆಸ್ ಅಧ್ಯಕ್ಷ ತೋರೆರ ಉದಯ, ಹಾಕತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶರೀನ್, ಹಿರಿಯ ಮುಖಂಡ ಮಂಞರ ಸಾಬು ತಿಮ್ಮಯ್ಯ, ಜಿಲ್ಲಾ ಅಲ್ಪಸಂಖ್ಯಾತರ ಕಾರ್ಯದರ್ಶಿ ಖಾಲಿದ್, ಉಳುವಾರನ ಪಳಂಗಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ಮೇಕೇರಿ ಹನೀಫ್, ಗ್ರಾ.ಪಂ. ಸದಸ್ಯ ಪಿಯುಶ್ ಫೆರೆರಾ, ಕಾರ್ಯಕರ್ತ ಹಾಕತ್ತೂರು ಗಂಗಾಧರ, ನಾಪೋಕ್ಲು ಎಸ್.ಸಿ. ಘಟಕದ ಅಧ್ಯಕ್ಷ ಹೆಚ್.ಸಿ. ಪೊನ್ನಪ್ಪ, ಬಾಳಾಡಿ ಪ್ರತಾಪ್, ಚೆಟ್ಟೊಳಿರ ಪ್ರಕಾಶ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ಓಡಿಯನ ನಂದ, ಓಡಿಯನ ಸವಿತಾ, ಓಡಿಯನ ಸೋಮಣ್ಣ, ಮಂದ್ರಿರ ತಿಮ್ಮಯ್ಯ, ಲತೀಫ್, ಮಾಜಿ ತಾ. ಪಂ. ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ 2016-17ನೇ ಸಾಲಿನಲ್ಲಿ 68 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಯಿತು.

ನಾರ್ಕೋಡಿ ಕುಟುಂಬಸ್ಥರ ರಸ್ತೆ, ಓಡಿಯನ ಕುಟುಂಬಸ್ಥರ ರಸ್ತೆ, ಮಡಿಯಾನ ಕುಟುಂಬಸ್ಥರ ರಸ್ತೆ, ಪೂಜಾರಿ, ಚೆರಿಯಮನೆ, ಆನೇರ ಕಾಲೋನಿ ರಸ್ತೆ, ಬಿಳಿಗೇರಿ ತೆಕ್ಕೆಡೆ ಕುಡೆಕಲ್ಲು ರಸ್ತೆ, ಕಣ್ಣಚಂಡ ಕುಟುಂಬಸ್ಥರ ರಸ್ತೆ, ಬಿಳಿಗೇರಿ ಅಂಬೆಕಲ್ಲು ರಸ್ತೆ, ದಂಬೆಕೋಡಿ ರಸ್ತೆ, ಅಂಗನವಾಡಿ ರಸ್ತೆ, ಮಂದ್ರಿರ ತಿಮ್ಮಯ್ಯ ಕುಟುಂಬಸ್ಥರ ರಸ್ತೆ, ಚೂರಿಕಾಡು ಮಸೀದಿರಸ್ತೆ, ತೊಂಭತ್ತು ಮನೆ ಶಾಲೆ ರಸ್ತೆ, ಹುಲಿತಾಳ ಪೈಸಾರಿ ರಸ್ತೆ, ಕೋಲೆಯಂಡ ಕುಟುಂಬಸ್ಥರ ರಸ್ತೆ, ಕುಂಜಿಲನ, ಮಂದ್ರಿರ ಮತ್ತು ಹುಸೇನ್ ಅವರ ಮನೆಗೆ ತೆರಳುವ ರಸ್ತೆ, ಹಾಕತ್ತೂರು ಈಶ್ವರ ದೇವಸ್ಥಾನ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.