ಗೋಣಿಕೊಪ್ಪ ವರದಿ, ಡಿ. 7 : ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಇಲಾಖೆವಾರು ಪರಿಶೀಲನೆ ನಡೆಸುವ ಮೂಲಕ ಸ್ಪಂದಿಸಲಾಗುವದು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭರವಸೆ ನೀಡಿದ್ದಾರೆ.

ಗೋಣಿಕೊಪ್ಪ ಪುತ್ತರಿ ರೈತ ಉತ್ಪಾದಕರ ಸಂಸ್ಥೆಯ ವತಿಯಿಂದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳು ಪರಿಹಾರ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಯಿತು.

ನಿರ್ದೇಶಕರುಗಳಾದ ಗೀತ ಚಂಗಪ್ಪ ಹಾಗೂ ಅಜಿತ್ ಚಂಗಪ್ಪ ಒಳಗೊಂಡ ತಂಡವು ನವದೆಹಲಿಗೆ ನಿಯೋಗ ತೆರಳಿ ಮನವಿ ಅರ್ಪಿಸಿದರು.

ಕಾಳು ಮೆಣಸನ್ನು ನೆರಳಿನಲ್ಲಿ ಬೆಳೆದು ಬಿಸಿಲಿನಲ್ಲಿ ಒಣಗಿಸ ಲಾಗುತ್ತದೆ. ಆದಕ್ಕೆ ಜಿಎಸ್‍ಟಿ ತೆರಿಗೆ ರದ್ದುಗೊಳಿಸಿ ಕೃಷಿ ಉತ್ಪಾದನೆಯಾಗಿ ಪರಿಗಣಿಸಿದರೆ ರೈತರಿಗೆ ಸಹಕಾರಿಯಾಗುತ್ತದೆ. ರಾಜ್ಯದಲ್ಲಿರುವ ಶೇ. 1.5 ಎಪಿಎಂಸಿ ದರ ರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.