ಕುಶಾಲನಗರ, ಡಿ. 7: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಟ್ಟಣದ ಚಿನ್ನಬೆಳ್ಳಿ ಆಭರಣ ತಯಾರಕರು, ಮಾಲೀಕರು ಹಾಗೂ ಕಾರ್ಮಿಕರ ಸಂಘದವರು ಪಾಲ್ಗೊಂಡರು.
ಸ್ಥಳೀಯ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಸಂಘದ ಅಧ್ಯಕ್ಷÀ ವಿ.ವಿ.ತಿಲಕ್ ಅಧ್ಯಕ್ಷತೆಯಲ್ಲಿ ಧರಣಿಯಲ್ಲಿ ಪಾಲ್ಗೊಂಡ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಉಪಾಧ್ಯಕ್ಷ ಕಾನಾರಾಮ್, ಕಾರ್ಯದರ್ಶಿ ವಿಮಲ್, ಜಂಟಿ ಕಾರ್ಯದರ್ಶಿ ಮುಖೇಶ್ ಜೈನ್, ಪ್ರಮುಖರಾದ ಶಾಂತಿಲಾಲ್, ಕಾಶಿ ಆಚಾರ್, ರಾಜೇಶ್, ಜೀತು, ಸುರೇಶ್, ಗೌತಮ್‍ಚಂದ್, ತಾಲೂಕು ಹೋರಾಟ ಕೇಂದ್ರ ಸಮಿತಿ ಪ್ರಮುಖರು ಇದ್ದರು.