ಮಡಿಕೇರಿ, ಡಿ. 7: ಸ್ಟಾಫ್ ಸೆಲೆಕ್ಷನ್ ಕಮಿಷನ್, ಭಾರತ ಸರ್ಕಾರ, ಇವರು ಕೇಂದ್ರ ಸರ್ಕಾರದ ವಾಪ್ತಿಗೆ ಒಳಪಡುವ ಬರುವ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಪೋಸ್ಟಲ್ ಅಸಿಸ್ಟಂಟ್/ಸಾರ್ಟಿಂಗ್ ಅಸಿಸ್ಟಂಟ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆ-2017 ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ ಮೂಲಕ ಅರ್ಜಿಗಳನ್ನು ಸಲ್ಲಿಸಲು ತಾ. 18 ಕೊನೆಯ ದಿನವಾಗಿರುತ್ತದೆ. ಶೈಕ್ಷಣಿಕ ವಿದ್ಯಾರ್ಹತೆ: ಪಿ.ಯು.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಜ್ಞಾನವುಳ್ಳವರಾಗಿರಬೇಕು. ವಯೋಮಿತಿ: ಕನಿಷ್ಟ18 ವರ್ಷಗಳು, ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ-27 ವರ್ಷಗಳು/ ಓಬಿಸಿ-30 ವರ್ಷಗಳು / ಪ.ಜಾ/ಪ.ಪಂ-32 ವರ್ಷಗಳು(01-08-2018ಕ್ಕೆ). ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಹಾಗೂ ಓಬಿಸಿಗೆ ಸೇರಿದ ಅಭ್ಯರ್ಥಿಗಳಿಗೆ- ರೂ. 100. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವದಿಲ್ಲ. ವೆಬ್‍ಸೈಟ್ hಣಣಠಿ://ssಛಿ.ಟಿiಛಿ.iಟಿ, hಣಣಠಿ://ssಛಿoಟಿಟiಟಿe.ಟಿiಛಿ.iಟಿ, hಣಣಠಿ://ssಛಿoಟಿಟiಟಿe2.gov.iಟಿ. ಹೆಚ್ಚಿನ ಮಾಹಿತಿಗೆ hಣಣಠಿ://ssಛಿ.ಟಿiಛಿ.iಟಿ ಅಂತರ್ಜಾಲ ತಾಣದಲ್ಲಿ ಪಡೆಯಬಹುದಾಗಿದೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಖುದ್ದಾಗಿ ಭೇಟಿ ನೀಡಿ ಪಡೆಯಬಹುದಾಗಿರುತ್ತದೆ.