ಶನಿವಾರಸಂತೆ, ಡಿ. 7: ಕೊಡ್ಲಿಪೇಟೆಯ ಹ್ಯಾಂಡ್ ಪೋಸ್ಟ್ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ ನಡೆಯಿತು. ಧರ್ಮಗುರುಗಳಾದ ಮಹಮದ್ ಫೈಜಿ ನೇತೃತ್ವ ವಹಿಸಿದ್ದರು. ಮೂರು ದಿನಗಳು ಧಾರ್ಮಿಕ ಕಾರ್ಯಕ್ರಮ, ಪ್ರವಚನ ಕಾರ್ಯಕ್ರಮ ನಡೆಸಲಾಯಿತು. ವಿಶೇಷವಾಗಿ ಅಲಂಕರಿಸಿದ ವೇದಿಕೆಯಲ್ಲಿ ಅರೇಬಿಕ್ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಪ್ರಕೀರ್ತನೆಯ ಹಾಡುಗಳು ಮತ್ತು ಕಿರು ಭಾಷಣ ನಡೆದು ಮಧ್ಯಾಹ್ನ ಶಾದಿ ಮಹಲ್‍ನಲ್ಲಿ ಊರಿನ ಸರ್ವ ಬಾಂಧವರಿಗೂ ಅನ್ನದಾನ ಮಾಡಲಾಯಿತು.
ಮದ್ರಸ ಅಧ್ಯಾಪಕರುಗಳಾದ ಮಜೀದ್ ಮುಸ್ಲಿಯಾರ್, ಹಾರಿಸದ ಬಯಾನಿ, ರಶೀದ್ ಅಮಿನಿ, ಶಾಕೀರ್ ಬಾಬವಿ. ಹನೀಫ್ ಧಾರಿಮಿ, ಆಡಳಿತ ಮಂಡಳಿ ಅಧ್ಯಕ್ಷ ಡಿ.ಎ. ಸುಲೈಮಾನ್, ಉಪಾಧ್ಯಕ್ಷ ಹೆಚ್.ಇ. ಸುಲೈಮಾನ್, ಕಾರ್ಯದರ್ಶಿ ಮಹಮ್ಮದ್, ಅಬೂಬಕ್ಕರ್ ಬಾಸಿತ್, ಸದಸ್ಯರುಗಳಾದ ಲತೀಫ್, ನಿಸಾರ್, ಖಲೀಲ್, ಇಬ್ರಾಹಿಂ, ಕರೀಂ, ರಜಾಕ್, ಅಶ್ರಫ್, ಹಿರಿಯರಾದ ಅಬೂಬಕ್ಕರ್ ಹಾಜಿ, ಮಹಮ್ಮದ್ ಹಾಜಿ, ಮಹಮ್ಮದಾಲಿ ಮೇಸ್ತ್ರಿ, ಉಸ್ಮಾನ್ ಹಾಜಿ, ವಕ್ಫ್ ಬೋರ್ಡ್‍ನ ಸದಸ್ಯರಾದ ಅಬೂಬಕ್ಕರ್, ಅಬ್ಬಾಸ್ ಹಾಜಿ ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡ ಮಹಮ್ಮದ್ ಹನೀಫ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.