ಮಡಿಕೇರಿ, ಡಿ. 7: ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರ ಸಹಾಯಕ್ಕಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸಮಿತಿಯು ನಡೆಸುತ್ತಿರುವ ಸಾಂತ್ವನ ಕಾರ್ಯಗಳನ್ನು ಪ್ರೋತ್ಸಾಹಿಸಬೇಕಾಗಿದ್ದು, ಜಿಲ್ಲೆಯ ಅನಿವಾಸಿ ಬಾಂಧವರು ಇಂತಹ ಸತ್ಕರ್ಮದಲ್ಲಿ ಕೈ ಜೋಡಿಸಿ ಸಂಘಟನೆಗೆ ಇನ್ನಷ್ಟು ಬಲವನ್ನು ನೀಡಬೇಕಾಗಿದೆ ಎಂದು ಮ್ಯಾಚ್’ದಿನ್ ಅಕಾಡೆಮಿ ಶಿಲ್ಪಿ, ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯೂ ಆದ ಸಯ್ಯದ್ ಖಲೀಲುಲ್ ಬುಖಾರಿ ತಂಘಲ್ ಕಡಲುಂಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಆಶ್ರಯದಲ್ಲಿ ದುಬೈನಲ್ಲಿ ನಡೆದ ಹುಬ್ಬುರ್ರಸೂಲ್ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಭಾಷಣ ಮಾಡಿದರು.

ರಾಜ್ಯ ಎಸ್‍ಎಸ್‍ಎಫ್ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅನ್ವಾರುಲ್ ಹುದಾ ವೀರಾಜಪೇಟೆ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್ ಮುಖ್ಯ ಭಾಷಣ ಮಾಡಿದರು. ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಲೂದ್ ಪಾರಾಯಣಕ್ಕೆ ಸಅದಿಯ ದುಬೈ ನಾಯಕರಾದ ಅಬ್ದುಲ್ ಗಫ್ಫಾರ್ ಸಅದಿ ಮತ್ತು ನಾಸಿರ್ ಸಅದಿ ನೇತೃತ್ವವನ್ನು ನೀಡಿದರು. ದುಬೈ ಆರ್‍ಎಸ್‍ಸಿ ಕಾರ್ಯಕರ್ತರಿಂದ ಬುರ್ದಾ ಮಜ್’ಲಿಸ್, ಕೊಡಗಿನ ಅನಿವಾಸಿ ಪುಟಾಣಿಗಳಿಂದ ಪ್ರವಾದಿ (ಸಅ) ಕೀರ್ತನೆಯ ಭಾಷಣ, ಹಾಡು, ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗನ್ನು ನೀಡಿತು.

ಹಾರಿಸ್ ಕೊಟ್ಟಮುಡಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ರಸಪ್ರಶ್ನೆ ಸ್ಪರ್ಧೆ ಆಕರ್ಷಣೀಯವಾಗಿತ್ತು. ಸುನ್ನಿ ಸಂಘ ಕುಟುಂಬದ ಹಿರಿಯ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಮುನ್ನುಡಿ ಭಾಷಣ ಮಾಡಿದರು. ವೆಲ್ಫೇರ್ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಪ್ರಾಸ್ತಾವಿಕ ಭಾಷಣ ಮಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು, ವೆಲ್ಫೇರ್ ಅಬುಧಾಬಿ ಸಮಿತಿ ಅಧ್ಯಕ್ಷ ಹಂಝ ಪೊನ್ನಂಪೇಟೆ, ಸಲಹಾ ಸಮಿತಿ ನಾಯಕ ಹಮೀದ್ ನಾಪೋಕ್ಲು, ಶಾರ್ಜಾ ಸಮಿತಿ ಅಧ್ಯಕ್ಷ ಇಬ್ರಾಹಿಂ ನಾಪೋಕ್ಲು, ಹಿರಿಯರಾದ ಅಹ್ಮದ್ ಚಾಮಿಯಾಲ್, ಹಾರಿಸ್ ಕುಂಜಿಲ, ಇಬ್ರಾಹಿಂ ಫೈಝಿ ಚಾಮಿಯಾಲ್, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು, ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಕೆಸಿಎಫ್ ದುಬೈ ಸೌತ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಜ್ ಅಹ್ಸನಿ ಸೇರಿದಂತೆ ಪ್ರಮುಖ ಸಾಮಾಜಿಕ ನಾಯಕರುಗಳು ಭಾಗವಹಿಸಿದ್ದರು.

ಅನ್ವಾರುಲ್ ಹುದಾ ಮತ್ತು ಮರ್ಕಝುಲ್ ಹಿದಾಯ ಯುಎಇ ಆರ್ಗನೈಸರ್ ಮುಹಮ್ಮದಲಿ ಮುಸ್ಲಿಯಾರ್ ಚಾಮಿಯಲ್ ಮತ್ತು ನಾಸಿರ್ ನಈಮಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸ್ವಾಗತ ಸಮಿತಿ ಕನ್ವಿನರ್ ಇರ್ಷಾದ್ ಕೊಂಡಂಗೇರಿ ಸ್ವಾಗತಿಸಿ, ಅರಾಫತ್ ನಾಪೋಕ್ಲು ವಂದಿಸಿದರು.