ಗೋಣಿಕೊಪ್ಪ ವರದಿ, ಡಿ. 7: ಸ್ಥಳೀಯ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಆಶ್ರಯದಲ್ಲಿ ತಾ. 10 ರಂದು ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಬೆಂಗಳೂರು ಮೆಟ್ರೋ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸಿಂಹಶಾಸ್ತ್ರಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರು ಅಪೋಲೋ, ಭಾರತ್ ಕ್ಯಾನ್ಸ್‍ರ್ ಆಸ್ಪತ್ರೆ ಹಾಗೂ ಬೆಂಗಳೂರು ಹೋಮ್ ಪ್ಲಸ್ ಅಸ್ಪತ್ರೆಗಳ ವೈದ್ಯರು ಶಿಬಿರದಲ್ಲಿ ಭಾಗಿಯಾಗಿ ಸಂಸ್ಥೆಯ ಕಾರ್ಯಕ್ಕೆ ನೆರವಾಗಲಿದ್ದಾರೆ. ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಫಲಾನುಭವಿಗಳಿಗೆ ಹೆಚ್ಚಿನ ಚಿಕಿತ್ಸೆಯನ್ನು ಉಚಿತವಾಗಿ ಕೊಡಿಸಲು ಸಂಸ್ಥೆ ಕೈಜೋಡಿಸಲಿದೆ ಎಂದು ತಿಳಿಸಿದರು.
ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ವರೆಗೆ ನಡೆಯಲಿದ್ದು, ಆಸಕ್ತರು ಶಿಬಿರ ನಡೆಯುವ ದಿನದಂದು ಸ್ಥಳದಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಉಚಿತವಾಗಿ ಪ್ರಯೋಗಾಲಯ ಪರೀಕ್ಷೆ, ಕ್ಯಾನ್ಸರ್, ಮಧುಮೇಹ, ಡಯಾಬಿಟಿಕ್, ಮೂಳೆ ರೋಗ, ಪ್ರಸೂತಿ ತಜ್ಞರು ಪರೀಕ್ಷೆ ನಡೆಸಲಿದ್ದಾರೆ. ತೀರಾ ಅನಿವಾರ್ಯ ಇರುವವರಿಗೆ ಉಚಿತವಾಗಿ ಚಿಕಿತ್ಸೆ ನಡೆಸಲು ಲಯನ್ಸ್ ಸಂಸ್ಥೆ ಯೋಜನೆ ರೂಪಿಸಲಿದೆ ಎಂದರು.
ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಡಿ. ಪೂಣಚ್ಚ ಮಾತನಾಡಿ, ಸಂಸ್ಥೆಯ ಸದಸ್ಯರಿಗೆ ಟ್ವಿನ್ನಿಂಗ್ ಕಾರ್ಯಕ್ರಮವನ್ನು ಪೊನ್ನಂಪೇಟೆ ಗ್ರೀನ್ ವ್ಯಾಲೀ ರೆಸಾರ್ಟ್‍ನಲ್ಲಿ ತಾ. 9 ರಂದು ಆಯೋಜಿಸಲಾಗಿದೆ ಎಂದರು.